ಉಪ್ಪಳ: ಸಮಗ್ರ ಶಿಕ್ಷಾ ಕಾಸರಗೊಡು ಇದರ ಆಶ್ರಯದಲ್ಲಿ ವಿಶಿಷ್ಟ ಚೇತನ ಮಕ್ಕಳಿಗಾಗಿ ಉಪ್ಪಳದಲಲಿರುವ ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಸೋಮವಾರ ಉದ್ಘಾಟನೆಗೊಂಡಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷÀತೆಯನ್ನು ಮಂಜೇಶ್ವರ ಬ್ಲಾಕ್ ಕಾರ್ಯನಿರೂಪಣಾಧಿಕಾರಿ ವಿಜಯಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್, ಡಯಟ್ ಪ್ರತಿನಿಧಿ ಶಶಿಧರ ಶುಭ ಹಾರೈಸಿದರು. ಉಪ ಯೋಜನಾಧಿಕಾರಿ ಗಂಗಾಧರ. ಎಂ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಿದರು. ಡಾ.ಬಾಲಸುಬ್ರಮಣ್ಯಂ ಶಿಬಿರದ ಬಗ್ಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ನಡೆಸಿದರು. 1ರಿಂದ ಪ್ಲಸ್ ಟು ವರೆಗಿನ ಸುಮಾರು 46 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದರು. ತರಬೇತುದಾರರಾದ ಗುರುಪ್ರಸಾದ್ ರೈ ಸ್ವಾಗತಿಸಿ, ಸಂಪನ್ಮೂಲ ಶಿಕ್ಷಕಿ ರೀಮಾ ಮೊಂತೇರೊ ವಂದಿಸಿದರು.


