ಕುಂಬಳೆ: ರಾಜಕೀಯವಾಗಿ ಜನರಿಂದ ತಿರಸ್ಕಾರಗೊಂಡಿರುವ ಎಡರಂಗವನ್ನು ದೇಶದ ಜನತೆ ರಾಜಕೀಯ ಭೂಪಟದಿಂದ ಈಗಾಗಲೇ ಹೋರಾಗಿರಿಸಿದ್ದಾರೆ. ಕೇರಳದಲ್ಲಿ ಅಳಿದುಳಿದಿರುವ ಎಡರಂಗ ಲೋಕಸಭಾ ಚುನಾವಣೆಯಲ್ಲಿ ಕೆರಳದಲ್ಲಿಯೂ ನಾಮವಶೇಷ ಆಗಲಿದೆ. ಎಡರಂಗದ ಉಳಿದಿರುವ ಮತಗಳನ್ನು ಮುಸ್ಲಿಂಲೀಗ್ ಗೆ ಮಾರಾಟ ಮಾಡುವುದೇ ಎಡರಂಗ ಕೆಲಸವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ ಕೆ ಕೃಷ್ಣದಾಸ್ ಹೇಳಿದರು.
ಕುಂಬಳೆಯ ಮಾಧವ ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಂಜೇಶ್ವರ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ವಿರೋಧಿ ಪಿಣರಾಯಿ ಸರ್ಕಾರ ಶಬರಿಮಲೆಗೆ ಮತ್ತೆ ಸ್ತ್ರೀಯರನ್ನು ಕರೆದೊಯ್ಯಲು ಕಾಯುತ್ತಿದೆ. ಪೊಲೀಸ್ ಇಲಾಖೆಯನ್ನು ಇದಕ್ಕಾಗಿ ಸಜ್ಜುಗೊಳಿಸುತ್ತಿದೆ. ಆದರೆ ಇನ್ನು ಈ ಹಿಂದಿನ ಇತಿಹಾಸ ಮರುಕಳಿಸದು ಎಂದು ಅವರು ಮುನ್ನೆಚ್ಚರಿಕೆ ನೀಡಿದರು.
ಬಿಜೆಪಿ ಮಂಡಲಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್,ನೇತಾರರಾದ ಕುಂಟಾರು ರವೀಶ ತಂತ್ರಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಪೂಕಟ್ಟೆ, ಪುಷ್ಪ ಅಮೆಕ್ಕಳ, ಎ.ಕೆ. ಕಯ್ಯಾರ್ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಮುರಳೀಧರ ಯಾದವ್ ನಾಯ್ಕಾಪು ಸ್ವಾಗತಿಸಿ, ಆದರ್ಶ್ ಬಿ.ಎಂ. ವಂದಿಸಿದರು.


