ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಓವರ್ ಸೀಯರ್ ಹುದ್ದೆಗೆ ಕರಾರು ಮೇರೆಗೆ ನೇಮಕಾತಿ ನಡೆಯಲಿದೆ. ಈ ಸಂಬಂಧ ಜು.11 ರಂದು ಬೆಳಿಗ್ಗೆ 11 ಕ್ಕೆ ಕುಂಬಳೆ ಗ್ರಾಮಪಂಚಾಯತಿ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅಂಗೀಕೃತ ಸಂಸ್ಥೆಯಿಂದ ಪಡೆದ ಸಿವಿಲ್ ಇಂಜಿನಿಯರ್ ಡಿಪ್ಲೊಮಾ ಕನಿಷ್ಠ ಶಿಕ್ಷಣಾರ್ಹತೆಯಾಗಿದೆ. ವೃತ್ತಿ ಪರಿಚಯ ಹೊಂದಿರುವವರಿಗೆ ಆದ್ಯತೆಯಿದೆ. ಆಸಕ್ತರು ವಯೋಮಿತಿ ಖಚಿತಪಡಿಸುವ ಸಹಿತ ಅರ್ಹತಾಪತ್ರಗಳ ಅಸಲಿ ಮತ್ತು ಸ್ವಯಂ ದೃಡೀಕರಿಸಿದ ನಕಲುಗಳ ಸಹಿತ ಹಾಜರಾಗಬಹುದು.
ಜೊತೆಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯಲ್ಲಿ ಅಳವಡಿಸಿ ಹಸುವಿನ ಹಟ್ಟಿ, ಮೇಕೆಯ ಗೂಡು,ಕೋಳಿಗೂಡು ಗಳ ನಿರ್ಮಣ, ಎರೆಗೊಬ್ಬರ ಪಿಟ್, ಬಾವಿ ರೀ ಚಾರ್ಜ್, ಕೃಷಿ ಅಗತ್ಯಕ್ಕಿರುವ ಕೆರೆ, ಬಾವಿ, ಮೀನು ಕೃಷಿಗಿರುವ ಕೆರೆ ನಿರ್ಮಾಣ ಇತ್ಯಾದಿಗಳಿಗೆ ಸೌಲಭ್ಯ ಒದಗಿಸಲಾಗುವುದು. ಅರ್ಜಿ ಫಾರಂ ವಿತರಣೆ ಇಂದು(ಜು.5) ಗ್ರಾಮಪಂಚಾಯತಿ ಕಚೇರಿಯಲ್ಲಿ ಆರಂಭಗೊಳ್ಳಲಿದೆ. ಜು.20ರ ಮುಂಚಿತವಾಗಿ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

