ಮಂಜೇಶ್ವರ: ಸಮಗ್ರ ಶಿಕ್ಷಣ ಕೇರಳ ಯೋಜನಯ ನೇತೃತ್ವದಲ್ಲಿ ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರದ (ಬಿ.ಆರ್.ಸಿ.) ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ದೈಹಿಕವಾಗಿ ವಿಶೇಷ ಚೇತನರಾಗಿರುವ, ಸೆರಿಬ್ರಲ್ ಪಾರ್ಸಿ, ಬಹುಮುಖ ವಿಶೇಷ ಚೇತನರಾಗಿರುವ ಮಕ್ಕಳಿಗಾಗಿ ವೈದ್ಯಕೀಯ ಶಿಬಿರ ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ಇತ್ತೀಚೆಗೆ ನಡೆಯಿತು.
ಕಾಸರಗೋಡು ತಾಲೂಕು ಆಸ್ಪತ್ರೆಯ ಆರ್ತೋಪೀಡಿಕ್ ಸರ್ಜನ್ ಡಾ.ಅರುಣ್ ರಾಂ ಶಿಬಿರದ ನೇತೃತ್ವ ವಹಿಸಿದ್ದರು. ಸುಮಾರು 40 ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದರು. ಇವರಿಗೆ ವೈದ್ಯರು ಸಲಹೆ ಮಡಿದ ಆರ್ತೋಟಿಕ್ ಉಪಕರಣಗಳನ್ನು ಶೀಘ್ರದಲ್ಲಿ ವಿತರಿಸಲಾಗುವುದು ಎಂದು ಬಿ.ಆರ್.ಸಿ. ಅಧಿಕಾರಿಗಳು ತಿಳಿಸಿರುವರು.

