ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇಂದು(ಜು.18), ನಾಳೆ(ಜು.19) ಮತ್ತು ಶನಿವಾರ(ಜು.20) ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದಿನಿಂದ (ಜು.18) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಸಿನ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ನಿಗಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಸತಿಗೆ ಅರ್ಹವಲ್ಲದ ಪ್ರದೇಶಗಳಲ್ಲಿ, ಮನೆಗಳಲ್ಲಿ ತಂಗಿದ್ದು ಜಿ.ಎಸ್.ಐ. ಪತ್ತೆಮಾಡಿರುವವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಆಯಾ ಗ್ರಾಮಗಳಲ್ಲಿ ಪುನರ್ವಸತಿ ಶಿಬಿರ ಆರಂಭಿಸಲು ಸಿದ್ಧತೆ ನಡೆಸುವಂತೆ ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ.
ರಾಜ್ಯ ದುರಂತ ನಿವಾರಣೆ ಪ್ರಧಿಕಾರ ಮಳೆಗಾಲ ಮುನ್ನೆಚ್ಚರಿಕೆಗಳ ಅಂಗವಾಗಿ ಪ್ರಕಟಿಸಿರುವ ಕೈಹೊತ್ತಗೆಯಲ್ಲಿ ಅಲರ್ಟ್ ಗಳ ಸ್ವಭಾವಕ್ಕನುಗುಣವಾಗಿ ಆಯಾ ಇಲಾಖೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಲಾಗಿದೆ. ಅವನ್ನು ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ 944.8125 ಮಿಮೀ ಮಳೆ ಸುರಿದಿದೆ. ಕಳೆದ 24 ತಾಸುಗಳಲ್ಲಿ ಜಿಲ್ಲೆಯಲ್ಲಿ 12.2 ಮಿಮೀ ಮಳೆ ಲಭಿಸಿದೆ.
ಯೆಲ್ಲೋ ಅಲೆರ್ಟ್ ಘೋಷಿಸಲಾದ ಜಿಲ್ಲೆಗಳು:
ಜುಲೈ 18: ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಎರ್ನಾಕುಲಂ, ತ್ರಿಶೂರು, ಪಾಲಕ್ಕಾಡ್, ಕೋಯಿಕೋಡ್, ವಯನಾಡ್,ಕಣ್ಣೂರು, ಕಾಸರಗೋಡು,
ಜುಲೈ 19: ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೋಟಯಂ, ತ್ರಿಶೂರು, ಕೋಯಿಕೋಡ್, ಕಾಸರಗೋಡು.
ಜುಲೈ 20: ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೋಟಯಂ, ಕಾಸರಗೋಡು.


