ಕಾಸರಗೋಡು: ರಾಷ್ಟ್ರೀಯ ವಾಚನಾ ಮಾಸಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಸಮಾರೋಪ ಇಂದು(ಜು.18) ನಡೆಯಲಿದೆ.
ಪಿ.ಎನ್.ಪಣಿಕ್ಕರ್ ಫೌಂಡೇಶನ್, ಕ್ಯಾನ್ ಫೆಡ್, ವಾಚನಾ ಸಪ್ತಾಹ ಸಮಿತಿ, ಪೆರಿಯ ಕೇಂದ್ರ ವಿವಿ ಮಲೆಯಾಳಂ ವಿಭಾಗ ಜಂಟಿ ವತಿಯಿಂದ ಒಂದು ತಿಂಗಳ ಕಾಲ ವೈವಿಧ್ಯಮಯ ಕಾರ್ಯಗಳನ್ನು ಈ ಅಂಗವಾಗಿ ನಡೆಸಲಾಗಿತ್ತು.
ಇಂದು(ಜು.18) ಬೆಳಗ್ಗೆ 11 ಗಂಟೆಗೆ ಪೆರಿಯ ಕೇಂದ್ರೀಯ ವಿವಿ ಕ್ಯಾಂಪಸ್ ನಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಉಪಕುಲಪತಿ ಡಾ.ಜಿ.ಗೋಪಕುಮಾರ್ ಉದ್ಘಾಟಿಸುವರು. ಪಿ.ಎನ್.ಪಣಿಕ್ಕರ್ ಫೌಂಡೇಶನ್ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಕೆ.ವಿ.ರಾಘವನ್ ಪಿ.ಎನ್.ಪಣಿಕ್ಕರ್ ಅವರ ಸಂಸ್ಮರಣೆ ನಡೆಸುವರು.

