ಬದಿಯಡ್ಕ: ಸಾಹಿತಿ, ಸಂಶೋಧಕ,ಅಧ್ಯಾಪಕ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಜನ್ಮದಿನಾಚರಣೆಯ ಅಂಗವಾಗಿ ಕವಿತಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ನಿಯಮ ಹಾಗು ಸೂಚನೆಗಳು ಈ ಕೆಳಗಿನಂತಿವೆ:
ಸ್ಪರ್ಧೆಯಲ್ಲಿ ಭಾಗವಹಿಸಲು ವಯೋಮಾನ, ಲಿಂಗ, ಜಾತಿ, ಸೀಮೆ ಇತ್ಯಾದಿ ಯಾವುದೇ ಮಿತಿಗಳಿಲ್ಲ. ಮುಕ್ತ ಅವಕಾಶವಿದೆ.ಕವನಗಳು ಸ್ವರಚಿತವಾಗಿದ್ದು, ಕನ್ನಡ ಭಾಷೆಯಲ್ಲಿರಬೇಕು, ವಿಷಯದ ಆಯ್ಕೆ ಕವಿಗಳ ಸ್ವಾತಂತ್ರಕ್ಕೆ ಬಿಟ್ಟದ್ದು, ಕವನದ ಸಾಲುಗಳ ಗರಿಷ್ಟಮಿತಿ- ಎ4 ಹಾಳೆಯ ಒಂದು ಪುಟ, ಒಬ್ಬರಿಗೆ ಒಂದೇ ಕವನಕ್ಕೆ ಅವಕಾಶ, ಕವಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದಿರಬೇಕು.ವಿಜೇತ ಪ್ರಥಮ ಬಹುಮಾನ ನಗದು, ಫಲಕ, ಪುಸ್ತಕ, ಅಲ್ಲದೆ ಮೂರು ಕವಿತೆಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ. ಯಾವುದೇ ಪ್ರವೇಶ ಶುಲ್ಕವಿಲ್ಲವಿರುವುದಿಲ್ಲ. ಆಸಕ್ತ ಕವಿಗಳು ಶ್ರೀಶ ಕುಮಾರ.ಪಿ, ಪಂಜಿತ್ತಡ್ಕ ಮನೆ, ಪೆರಡಾಲ ಅಂಚೆ, ಕಾಸರಗೋಡು-671551 ಎಂಬ ವಿಳಾಸಕ್ಕೆ ತಲಪುವಂತೆ ಜು. 31ರ ಮೊದಲು ಕಳಿಸಿಕೊಡಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9633876833ನ್ನು ಸಂಪರ್ಕಿಸಲು ವಿನಂತಿಸಲಾಗಿದೆ.


