ಮಂಜೇಶ್ವರ: ಯಕ್ಷ ಬಳಗ ಹೊಸಂಗಡಿ ಇದರ ವತಿಯಿಂದ 28ನೇ ವರ್ಷದ ಆಷಾಡ ಮಾಸದ ಯಕ್ಷಗಾನ ಕೂಟವು ನಾಳೆ(ಜು.14)ಯಿಂದ ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಆರಂಭಗೊಳ್ಳಲಿದೆ.
ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಎನ್.ಕಡಂಬಾರ್, ಕ್ಷೇತ್ರದ ಪ್ರಧಾನ ಆರ್ಚಕರಾದ ಶ್ರೀಕಾಂತ ಮಾಣಿತ್ತಾಯ ಮತ್ತು ವೇದಮೂರ್ತಿ ರಾಮದಾಸ ಆಚಾರ್ಯ ಕಡಂಬಾರು ಅವರು ದೀಪ ಬೆಳಗಿಸಿ ಉದ್ಘಾಟಿಸಲಿರುವರು.
ಬಳಿಕ ರಾಮಾಯಾಣದ ಯಕ್ಷಗಾನ ತಾಳಮದ್ದಳೆ ಯಕ್ಷ ಬಳಗ ಮತ್ತು ನುರಿತ ಕಲಾವಿದರಿಂದ ಜರಗಲಿರುವುದು. ಈ ಸರಣಿ ತಾಳಮದ್ದಳೆಯು ಜುಲೈ 21ರಂದು ಕಳಿಯೂರು ಶ್ರೀ ರಕ್ತೇಶ್ವರೀ ಭಜನಾ ಮಂದಿರ, ಜುಲೈ 28ರಂದು ಕಾವೀ ಸುಬ್ರಮಣ್ಯ ದೇವಸ್ಥಾನ ವರ್ಕಾಡಿ, ಆಗೋಸ್ಟ್ 4ರಂದು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ, ಆಗೋಸ್ಟ್ 11ರಂದು ಉದ್ಯಾವರ 2ನೇ ರೈಲ್ವೇ ಗೇಟ್ ಬಳಿಯ ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ಹಾಗೂ ಆಗೋಸ್ಟ್ 18ರಂದು ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವ ಕ್ಷೇತ್ರದಲ್ಲಿ ನಡೆಯಲಿದೆ. ಸಮರೋಪ ಸಮಾರಂಭ ಆ.24ರಂದು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸಂಘಟಕ ಬೆಜ್ಜಂಗಳ ನಾರಾಯಣ ಪೂಜಾರಿಯವರಿಗೆ ಸಮ್ಮಾನ ನಡೆಯುವುದರೊಂದಿಗೆ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ `ಸತ್ಯ ಪರೀಕ್ಷೆ' ಎಂಬ ಯಕ್ಷಗಾನ ತಾಳಮದ್ದಳೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಯಕ್ಷ ಬಳಗ ಹೊಸಂಗಡಿ ಸಂಚಾಲಕ ಸಂಕಬೈಲು ಸತೀಶ್ ಅಡಪ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

