HEALTH TIPS

ಸಾಹಿತ್ಯದ ಅಧ್ಯಯನದಿಂದ ಸಂಸ್ಕøತಿ ಪರಿಚಯ : ನಾರಾಯಣ ಗಟ್ಟಿ-ವಿವಿ ಚಾಲ ಕ್ಯಾಂಪಸ್ ನಲ್ಲಿ ನಡೆದ ದತ್ತಿ ಉಪನ್ಯಾಸದಲ್ಲಿ ಅಭಿಮತ

         
      ಕಾಸರಗೋಡು: ವ್ಯಕ್ತಿಯೊಬ್ಬನ ವ್ಯಕ್ತಿತ್ವವು ಆತ ಬಳಸುವ ಭಾಷೆಯಿಂದ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ  ಆಡುವ ಭಾಷೆಯೂ ಒಂದು ಸಮಾಜದಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ನಮ್ಮ ನಾಡಿನ ಸಂಸ್ಕøತಿಯು ಅವಲಂಬಿತವಾಗಿರುತ್ತದೆ. ಕನ್ನಡ ಸಾಹಿತ್ಯದ ಅಧ್ಯಯನದಿಂದ ಸಂಸ್ಕøತಿ ಪರಿಚಯವಾಗುತ್ತದೆ ಎಂಬುದಾಗಿ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಗಟ್ಟಿ ಹೇಳಿದರು.
      ಅವರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ  ಕಣ್ಣೂರು ವಿವಿಯ ಚಾಲ ಕ್ಯಾಂಪಸ್‍ನ ಕನ್ನಡ ವಿಭಾಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಸಾಹಿತ್ಯ ಸಂಸ್ಕøತಿ ಕುರಿತು ಮಾತನಾಡಿದರು.
      ಕಾರ್ಯಕ್ರಮದಲ್ಲಿ ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನಲ್ಲಿ ಕಸಾಪ ಘಟಕವು ಹಲವು ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ ಸಂಸ್ಕøತಿಯ ಉಳಿವಿಗಾಗಿ ನಿರಂತರ ಶ್ರಮಿಸಿದೆ. ಅದರೊಂದಿಗೆ ಜಿಲ್ಲೆಯ ಕನ್ನಡಿಗರ ಆನೇಕ ಬೇಡಿಕೆಗಳಿಗಾಗಿ ನಡೆಯುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದಾಗಿ ಅವರು ಹೇಳಿದರು.
     ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಿಕೆ, ಹಿರಿಯ ಕವಯತ್ರಿ ಡಾ.ಯು.ಮಹೇಶ್ವರಿ ಅವರು ಕನ್ನಡ ಪ್ರಾಚೀನ ಸಾಹಿತ್ಯದಲ್ಲಿ ಜೈನರ ಕೊಡುಗೆ ಅಪಾರವಾದದ್ದು. ಕನ್ನಡವನ್ನು ಒಂದು ಮಾಧ್ಯಮವಾಗಿಸಿ ಕಾವ್ಯರಚನೆಗಳು, ಸಾಹಿತ್ಯ ರಚನೆಯಲ್ಲಿ ಜೈನರು ತೊಡಗಿಸಿಕೊಂಡರಲ್ಲದೇ, ಧರ್ಮ ಮತ್ತು ಕಾವ್ಯ ಧರ್ಮಗಳ ಮೂಲಕ ಕನ್ನಡ ಕವಿಗಳ ಸಮನ್ವಯಗೊಳಿಸಿ ಮೆರೆದಿದ್ದಾರೆ. ಜೈನ ಪರಂಪರೆಯು ಬಹಳ ವಿಸ್ತರವಾದದ್ದು. ಕಾಸರಗೋಡಿನಲ್ಲಿ ಜೈನರ ಪರಂಪರೆಯ ಇತಿಹಾಸಕ್ಕೆ ತಳಂಗರೆಯ ಶಾಸನ ಸಾಕ್ಷಿಯಾಗಿದೆ ಎಂದರು.
        ತುಳು-ಕನ್ನಡ ಭಾಷಾ ಬಾಂಧವ್ಯ ವಿಷಯದಲ್ಲಿ ಉಪನ್ಯಾಸ ನೀಡಿದ ಕಾಸರಗೋಡು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ, ಕವಿ ಡಾ.ರಾಧಾಕೃಷ್ಣ ಬೆಳ್ಳೂರು ಅವರು ನೆಲದ ಮೂಲ ಭಾಷೆಯಾಗಿರುವ ತುಳು ಭಾಷೆಯು ರಾಜಕೀಯ ಆಡಳಿತ ಕೊರತೆಯಿಂದ ಮುಖ್ಯವಾಹಿನಿಯಿಂದ ಹಿಂದೆ ಸರಿದಿದೆ. ಮುದ್ರಣ ಮಾಧ್ಯಮಗಳೂ ಕೂಡಾ ಅದನ್ನು ಕೈಬಿಟ್ಟ ಕಾರಣದಿಂದ ತುಳ ಲಿಪಿ ಬಳಕೆಯಿಂದ ದೂರ ಸರಿಯಿತು. ಕನ್ನಡ ಅದಕ್ಕೆ ಪೆÇೀಷಕವಾಗಿ ನಿಂತು ಭಾಷೆಯ ಸುಸ್ಥಿರತೆಗೆ ಕಾರಣವಾಯಿತು ಎಂದರು.
     ಎಂ.ಕೆ.ಜಿನಚಂದ್ರನ್ ದತ್ತಿ ಉಪನ್ಯಾಸ ಕೊಡುಗೆಯನ್ನು ಚಂದ್ರಪ್ರಭಾ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಎಂ.ಜಿ.ವಿಜಯಪದ್ಮನ್ ನೀಡಿದರು. ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಕಣ್ಣೂರು ವಿವಿ ಭಾರತೀಯ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಕಸಾಪ ಕೇರಳ ಗಡಿನಾಡ ಘಟಕ ಗೌರವ ಕಾರ್ಯದರ್ಶಿ  .ಎಸ್.ನವೀನಚಂದ್ರ ಮಾನ್ಯ ವಂದಿಸಿದರು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries