ಉಪ್ಪಳ: ಪ್ರತಾಪನಗರ ಶ್ರೀ ಗೌರೀಗಣೇಶ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ 36ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ, 3ನೇ ವರ್ಷದ ಭಜನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಮನೆಗಳಿಗೆ ತರಕಾರಿ ಬೀಜ ವಿತರಣೆ ಸಮಾರಂಭ ಗಣೇಶ ಮಂದಿರದಲ್ಲಿ ಭಾನುವಾರ ನಡೆಯಿತು.
ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಉತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಎಂ. ಅಧ್ಯಕ್ಷತೆ ವಹಿಸಿದರು. ಅಶೋಕ್ ಕುಮಾರ್ ಹೊಳ್ಳ, ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ಮುಂಬೈ ಉದ್ಯಮಿ ಸಂಜೀವ ಶೆಟ್ಟಿ ಮಾತನಾಡಿದರು. ಸ್ಥಳೀಯ ಹಿರಿಯರಾದ ಶೇಖರ ಪೂಜಾರಿ, ರಾಮಕೃಷ್ಣ ಹೊಳ್ಳ, ಶಿವಾನಂದ ಆಚಾರ್ಯ, ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ ಆಳ್ವ ತಿಂಬರ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪ್ರಾಸ್ತಾವಿಕ ಮಾತನಾಡಿದರು. ಪ್ರತಾಪನಗರ ಶ್ರೀ ರಾಮ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಹರಿಶ್ಚಂದ್ರ ಬಲ್ಲಾಳ್ ಸ್ವಾಗತಿಸಿದರು. ಮಧು ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಆಚಾರ್ಯ ವಂದಿಸಿದರು.


