HEALTH TIPS

ಕೂಟಮಹಾಜಗತ್ತು ಮಂಗಲ್ಪಾಡಿ ಅಂಗಸಂಸ್ಥೆ ವಾರ್ಷಿಕ ಮಹಾಸಃಭೆ


      ಉಪ್ಪಳ: ಕೂಟಮಹಾಜಗತ್ತು ಸಾಲಿಗ್ರಾಮ ಮಂಗಲ್ಪಾಡಿ ಅಂಗಸಂಸ್ಥೆಯ 61 ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಹೊಸಂಗಡಿ ಚೆಕ್‍ಪೋಸ್ಟ್ ಸಮೀಪದ ಶ್ರೀಗುರುನರಸಿಂಹ ಕಲ್ಯಾಣಮಂಟಪದಲ್ಲಿ ಗಣಪತಿಹವನದೊಂದಿಗೆ ನಡೆಯಿತು.
   ಅಂಗಸಂಸ್ಥೆಯ ಅಧ್ಯಕ್ಷ ಪೆಲತ್ತಡ್ಕ ಶಿವರಾಮ ನಾವಡರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯಲ್ಲಿ  ಮುಖ್ಯ ಅತಿಥಿಗಳಾಗಿ ಕೇಂದ್ರ ಘಟಕದ ಅಧ್ಯಕ್ಷ ಶ್ರೀಧರ ಮಯ್ಯ ಬೆಂಗಳೂರು ಉಪಸ್ಥಿತರಿದ್ದರು. ಗುರುನರಸಿಂಹ ದೇವಸ್ಥಾನದ ಧರ್ಮದರ್ಶಿ ಕೆ.ಅಶೋಕಕುಮಾರ್ ಹೊಳ್ಳ ಗುರುಸಂದೇಶ ವಾಚಿಸಿದರು. ಕೂಟಮಹಾಜಗತ್ತಿನ ಭೀಷ್ಮ ಡಾ.
ಕೆ.ಪಿ. ಹೊಳ್ಳ ಕ್ಯಯ್ಯಾರ್ ಉಪಸ್ಥಿತರಿದ್ದರು. ಝೀ.ಟಿ.ವಿ ಸರಿಗಮಪ ಸ್ಪರ್ಧಾ ವಿಜೇತೆ  ಕೀರ್ತನ್ ಹೊಳ್ಳ ಮಂಗಳೂರು ಇವರನ್ನು ಈ ಸಂದರ್ಭ ಗೌರವಿಸಲಾಯಿತು. ಗತವರ್ಷದ ಆಯವ್ಯಯವನ್ನು ಮಂಡಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ 'ಪ್ರತಿಭಾಪುರಸ್ಕಾರ' ನೀಡಿ ಗೌರವಿಸಲಾಯಿತು. ಅಪರಾಹ್ನ ಯುವ ವೇದಿಕೆಯ ಯಕ್ಷಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ "ಸುದರ್ಶನ ವಿಜಯ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
        ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಶಿವಾನಂದ ಮಯ್ಯ ಐಲ, ಉಪಾಧ್ಯಕ್ಷರುಗಳಾಗಿ ಗೋಪಾಲಕೃಷ್ಣ ಮಯ್ಯ ಕಡೆಗದ್ದೆ, ಜ ಯ್ಯಲಕ್ಷ್ಮಿ ಕಾರಂತ ಕೋರ್ತಿಮಾರು, ಕಾರ್ಯದರ್ಶಿಯಾಗಿ ಸುರೇಶ ಹೊಳ್ಳ ಕೃಯ್ಯಾರು, ಜೊತೆ ಕಾರ್ಯದರ್ಶಿಯಾಗಿ ರಘು ಪ್ರಸಾದ ನಾವಡ ಬಂದ್ಯೋಡು, ಕೋಶಾಧಿಕಾರಿಯಾಗಿ  ಗಣೇಶ ಐತಾಳ ಶಿರಿಯ, ಸಂಘಟನಾ ಕಾರ್ಯದರ್ಶಿಯಾಗಿ ದಾಮೋದರು ಮಯ್ಯ ಬಜೆ ಹಾಗೂ ಸದಸ್ಯರನ್ನು ಆಯ್ಕೆಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries