ಮುಳ್ಳೇರಿಯ: ಕಾರಡ್ಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಪತ್ರಿಕಾ ದಿನವನ್ನು ಸೋಮವಾರ ಆಚರಿಸಲಾಯಿತು.
ಶಾಲಾ ಅಸೆಂಬ್ಲಿಯಲ್ಲಿ ಹಿರಿಯ ಅಧ್ಯಾಪಕಿ ಭಾನುಮತಿ ಟೀಚರ್ ಕನ್ನಡ ಪತ್ರಿಕಾ ದಿನಾಚರಣೆಯ ಔಚಿತ್ಯವನ್ನು ತಿಳಿಸಿದರು. ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಶರಣ್ಯಾ, 1843 ಜುಲೈ 1ರಂದು ಆರಂಭವಾಗಿದ್ದ ಕನ್ನಡದ ಮೊದಲ ದಿನ ಪತ್ರಿಕೆ `ಮಂಗಳೂರು ಸಮಾಚಾರ' ಪತ್ರಿಕೆಯ ಕುರಿತಾಗಿ ಮಾಹಿತಿಗಳನ್ನು ಹಂಚಿಕೊಂಡರು. ನೌಕರ ಸಂಘದ ಕಾರ್ಯದರ್ಶಿ ಅಜಿತ್ ಮಾಸ್ತರ್ ಹಾಗೂ ಇತರ ಅಧ್ಯಾಪಕ, ಅಧ್ಯಾಪಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಸಪ್ರಶ್ನೆ : ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ರಸಪ್ರಶ್ನೆ ಪೆಟ್ಟಿಗೆಯನ್ನು ಅಳವಡಿಸಲಾಗಿತ್ತು. ಕನ್ನಡದ ಮೊದಲ ಪತ್ರಿಕೆಯ ಕುರಿತಾಗಿ ಒಂದೇ ಪ್ರಶ್ನೆಯನ್ನು ಕನ್ನಡದಲ್ಲಿ ಹಾಗೂ ಮಲಯಾಳದಲ್ಲಿ ಬರೆದು ಪೆಟ್ಟಿಗೆಗೆ ಅಂಟಿಸಲಾಗಿತ್ತು. ಉತ್ತರವನ್ನು ಬರೆದು ಪೆಟ್ಟಿಗೆಯಲ್ಲಿ ಹಾಕುವಂತೆ ಸೂಚಿಸಿ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು.


