HEALTH TIPS

ಭಾರತ-ಬಾಂಗ್ಲಾ: ರಾಷ್ಟ್ರಗಳು ಎದುರಾಳಿಯಾಗಿದ್ದರೂ ರಾಷ್ಟ್ರಗೀತೆಯ ಮೂಲ ಒಂದೇ

      !
      ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ನ ಬಮಿರ್ಂಗ್ ಹ್ಯಾಮ್ ನಲ್ಲಿರುವ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾರತ- ಬಾಂಗ್ಲಾ ಎದುರಾಳಿ ರಾಷ್ಟ್ರಗಳಾಗಿ ನಿನ್ನೆ ಹೋರಾಡಿತು.
ಆದರೆ ವಿಶೇಷವೆಂದರೆ ವಿಶ್ವಕಪ್ ಗೆಲ್ಲುವ ಕನಸಷ್ಟೇ ಎರಡೂ ರಾಷ್ಟ್ರಗಳ ಸಮಾನ ಅಂಶವಾಗಿಲ್ಲ, ಬದಲಾಗಿ ಎರಡೂ ರಾಷ್ಟ್ರಗಳಿಗೆ ರಾಷ್ಟ್ರಗೀತೆ ಬರೆದವರು ರವೀಂದ್ರನಾಥ್ ಠಾಗೂರ್. ಪಂದ್ಯ ಪ್ರಾರಂಭವಾಗುತ್ತಿದ್ದಂತೆಯೇ ಉಭಯ ರಾಷ್ಟ್ರಗಳ ಪ್ರಜೆಗಳೂ ಸಾಮಾಜಿಕ ಜಾಲತಣಾಗಳಲ್ಲಿ ರವೀಂದ್ರನಾಥ್ ಠಾಗೂರ್ ಅವರನ್ನು ಸ್ಮರಿಸಿದ್ದಾರೆ.
     1905 ರಲ್ಲಿ ಬ್ರಿಟೀಷರು ಬಂಗಾಳವನ್ನು ವಿಭಜನೆ ಮಾಡಿದ ನಂತರ ಠಾಗೂರ್ ಅವರು ಅಮರ್ ಸೋನಾ ಬಾಂಗ್ಲಾ ರಚನೆ ಮಾಡಿದ್ದರು. ಠಾಗೂರ್ ರ ರಚನೆಯ ಮೊದಲ ಚರಣ ಭಾರತ ಭಾಗ್ಯ ವಿಧಾತವನ್ನು ಭಾರತದ ರಾಷ್ಟ್ರಗೀತೆ ಜನ ಗಣ ಮನದಲ್ಲಿ 1950 ರಲ್ಲಿ ಅಳವಡಿಸಿಕೊಳ್ಳಲಾಯಿತು. ಅಮರ್ ಸೋನಾ ಬಾಂಗ್ಲಾದ ಮೊದಲ 10 ಸಾಲುಗಳನ್ನು 1971 ರಲ್ಲಿ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಬಾಂಗ್ಲಾ ದೇಶ ತನ್ನ ರಾಷ್ಟ್ರಗೀತೆಗೆ ಅಳವಡಿಸಿಕೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries