ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠದ ಶ್ರೀನಾಗ ಸಹಿತ ಸಪರಿವಾರ ಧರ್ಮದೈವಗಳಿಗೆ ಕರ್ಕಾಟಕ ಮಾಸದ ವಿಶೇಷ ತಂಬಿಲ ಸೇವೆ ಮಂಗಳವಾರ ಜರುಗಿತು.
ಶ್ರೀಮಠದ ತಂತ್ರಿರ್ಯ ಬ್ರಹ್ಮಶ್ರೀ ಮಾಧವ ಆಚಾರ್ಯ ಮಾಯಿಪ್ಪಾಡಿ ಅವರ ಪ್ರಧಾನ ಆಚಾರ್ಯತ್ವದಲ್ಲಿ ನಡೆದ ವೈದಿಕ ಕಾರ್ಯಕ್ರಮಗಳಲ್ಲಿ ಬ್ರಹ್ಮಶ್ರೀ ಕೇಶವ ಆಚಾರ್ಯ ಮಾಯಿಪ್ಪಾಡಿ, ಬ್ರಹ್ಮಶ್ರೀ ಪುರೋಹಿತ್ ವಾಸುದೇವ ಆಚಾರ್ಯ ನೀರ್ಚಾಲು, ಬ್ರಹ್ಮಶ್ರೀ ಪುರೋಹಿತ್ ಜನಾರ್ಧನ ಆಚಾರ್ಯ ಮಧೂರು, ಪುರೋಹಿತ್ ಮೌನೇಶ್ ಆಚಾರ್ಯ ಪುತ್ತಿಗೆ , ಪುರೋಹಿತ್ ವಾಮದೇವ ಆಚಾಂiÀರ್i ಮಾಯಿಪ್ಪಾಡಿ ನೇತೃತ್ವ ವಹಿಸಿದರು. ಶ್ರೀ ಐವರು ಭಗವತಿ, ಶ್ರೀ ವಿಷ್ಣು ಮೂರ್ತಿ, ಶ್ರೀ ಬೀರ್ನಾಳ್ವ ದೈವ, ಶ್ರೀ ಗುಳಿಗ ದೈವ ಹಾಗೂ ಶ್ರೀ ನಾಗದೇವತೆಗಳ ಸನ್ನಿಧಾನದಲ್ಲಿ ತಂಬಿಲ ಸೇವೆ ಹಾಗೂ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.
ಮಠದ ಪದಾಧಿಕಾರಿಗಳಾದ ಪುರುಷೋತ್ತಮ ಆಚಾರ್ಯ ಕಂಬಾರು, ಜಗದೀಶ ಆಚಾರ್ಯ ಕಂಬಾರು, ನಾರಾಯಣ ಆಚಾರ್ಯ ಕಂಬಾರು, ಮಹೇಶ್ ಆಚಾರ್ಯ ಮಧೂರು, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ಮೌನೇಶ್ ಆಚಾರ್ಯ ಜೆ.ಪಿ ನಗರ, ಸದಸ್ಯರಾದ ಪೆರ್ಣೆ ವಿಷ್ಣು ಆಚಾರ್ಯ, ಗೋಪಾಲ ಆಚಾರ್ಯ ಪುತ್ತಿಗೆ, ಅನಂತ ಆಚಾರ್ಯ ಕಟ್ಟತ್ತಡ್ಕ, ಯಾದವ ಆಚಾರ್ಯ ಮಾಯಿಪ್ಪಾಡಿ, ದೇವಪ್ಪ ಆಚಾರ್ಯ ಬಂದ್ಯೋಡು, ನಿರಂಜನ ಆಚಾರ್ಯ ಬಂದ್ಯೋಡು, ಲಕ್ಷ್ಮೀನಾರಾಯಣ ಆಚಾರ್ಯ ಸೀತಾಂಗೋಳಿ, ಸುಬ್ರಹ್ಮಣ್ಯ ಆಚಾರ್ಯ ಮನ್ನಿಪ್ಪಾಡಿ, ಶಶಿಧರ ಆಚಾರ್ಯ ನೀರ್ಚಾಲು, ಪದ್ಮನಾಭ ಆಚಾರ್ಯ ಬಾಡೂರು ಮಂತಾದವರು ಭಾಗವಹಿಸಿದರು.

