HEALTH TIPS

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಭಾರತ ವಿಶ್ವಮಟ್ಟಕ್ಕೆ-ವಿ.ಬಿ.ಶೆಟ್ಟಿ


         ಉಪ್ಪಳ:  ಪ್ರದಾನಿ ನರೇಂದ್ರ ಮೋದಿಯವರ ಆಡಳಿತದಿಂದ ಭಾರತ ವಿಶ್ವಮಟ್ಟಕ್ಕೇರಿದೆ.ಸರ್ವವ್ಯಾಪಿ,ಸರ್ವಸ್ಪರ್ಷಿ,ಮೇರಾ ಪರಿವಾರ್ ಧ್ಯೇವಾಕ್ಯದ ಆಡಳಿತದಿಂದ ದೇಶವಿಂದು ಅಭಿವೃದ್ಧಿಶೀಲ ದೇಶವಾಗಿ ಉನ್ನತ ಸ್ಥಾನಕ್ಕೇರಿದೆ. ಎಬುದಾಗಿ ಬಿ.ಜೆ.ಪಿ.ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಹೇಳಿದರು.
     ಪೈವಳಿಕೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಪಂಚಾಯತಿ ಬಿ.ಜೆ.ಪಿ.ಸಮಾವೇಶವನು ್ನಉದ್ಘಾಟಿಸಿ ಅವರು ಮಾತನಾಡಿದರು.
     ದೇಶದಾದ್ಯಂತ 51 ಶೇಕಡ ಮತ ಪಡೆದ ಎನ್‍ಡಿಎ ಪಕ್ಷದ ಪ್ರದಾನಿಯವರ ಅಖಂಡ ಭಾರತದ ಸಂಕಲ್ಪ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ.ಕೇರಳದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪನ ಶಾಪದಿಂದ ಸಿ.ಪಿ.ಎಂ.ಸರ್ವನಾಶವಾಗಿಲಿದೆ ಎಂದರು.ಪಕ್ಷದ ಸದಸ್ಯತ್ವ ಅಭಿಯಾನವನ್ನು ಕಾರ್ಯಕರ್ತರು ಯಶಸ್ವಿಸಗೊಳಿಸಲು ಕರೆ ನೀಡಿದರು.
    ಮಂಡಲ ಬಿಜೆಪಿ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿ ಕೇಂದ್ರ ಸರಕಾರದ ಭ್ರಷ್ಟಾಚಾರ ಆಡಳಿತದಲ್ಲಿ ದೇಶ ಸುಭಿಕ್ಷೆಯತ್ತ ಸಾಗುತ್ತಿದೆ.ಮುಂದಿನ ಮಂಜೇಶ್ವರ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕೆಂದರು. ಪಂಚಾಯತಿ ಬಿ.ಜೆ.ಪಿ.ಸಮತಿ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದರು.ಪಕ್ಷದ ನಾಯಕರಾದ ಸರೋಜಾ ಆರ್.ಬಲ್ಲಾಳ್,ಪುಷ್ಪಾಲಕ್ಷ್ಮಿ,ಕೆ.ಜಯಲಕ್ಷ್ಮಿ ಭಟ್,ಎಂ.ಹರಿಶ್ಚಂದ್ರ ಮಂಜೇಶ್ವರ,ಚಂದ್ರಕಾಂತ್ ಶೆಟ್ಟಿ,ಪ್ರಸಾದ್ ರೈ ಕಯ್ಯಾರ್,ಅಚ್ಯುತ ಚೇವಾರ್,ಪ್ರವೀಣಚಂದ್ರ ಬಲ್ಲಾಳ್,ಧನರಾಜ್ ಪ್ರತಾಪನಗರ,ಮಣಿಕಂಠ ರೈ,ಮನುಕುಮಾರ್ ಪೆರ್ವಡಿ ಉಪಸ್ಥಿತರಿದ್ದರು.ಸಮಾವೇಶದಲ್ಲಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಿಪಿಐ ನಾಯಕ,ಧಾರ್ಮಿಕ ಸಾಮಾಜಿಕ ನಾಯಕ ಮಹಾಬಲ ಪೂಜಾರಿ ಸುದೆಂಬಳ ಮತ್ತು ನಿವೃತ್ತ ಸೈನಿಕ ಅ„ಕಾರಿ ಐತ್ತಪ್ಪ ಅಡ್ಯಂತಾಯ ಕುರುಡಪದವು ಅವರನ್ನು ಶಾಲು ಹಾಕಿ ಪಕ್ಷದ ಸದಸ್ಯತನ ನೀಡಿ ಸ್ವಾಗತಿಸಲಾಯಿತು.ಹರಿಣಾಕ್ಷ ಬದಿಯಾರು ಸ್ವಾಗತಿಸಿದರು.ಸುಂದರ ಶೆಟ್ಟಿ ಕಳಾಯಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries