ಬದಿಯಡ್ಕ : ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸಮುದಾಯದ ಹಿರಿಯರೂ, ಸಂಘದ ಸಭಾಭವನ ನಿರ್ಮಿಸಲು ಸ್ಥಳ ನೀಡಿದ ಉದಾರದಾನಿ, ಯಕ್ಷಗಾನ ಕಲಾವಿದ ಪರ್ಮಲೆ ಪಡ್ರೆ ಇವರಿಗೆ ಸಂತಾಪ ಸೂಚಿಸಲಾಯಿತು. ಬದಿಯಡ್ಕದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಚಂದಪ್ಪ ಕಕ್ವೆ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯಾಧ್ಯಕ್ಷ ಅಂಗಾರ ಅಜಕ್ಕೋಡು, ಸಲಹಾ ಸಮಿತಿ ಸದಸ್ಯ ಪದ್ಮನಾಭ ಚೇನೆಕ್ಕೋಡು, ಕೃಷ್ಣದಾಸ್ ದರ್ಬೆತ್ತಡ್ಕ, ಪರ್ಮಲೆ ಪಡ್ರೆಯವರ ಬಗ್ಗೆ ಮಾತನಾಡಿದರು. ರವಿ ಕನಕಪ್ಪಾಡಿ, ಹರಿರಾಮ ಕುಳೂರು, ವಿನೋದ್ ಬೇಪು, ಗೋಪಾಲ ದರ್ಬೆತ್ತಡ್ಕ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ಸ್ವಾಗತಿಸಿ, ಸುಂದರ ಸುದೆಂಬಳ ವಂದಿಸಿದರು.
ಮೊಗೇರ ಸಂಘದಿಂದ ಸಂತಾಪ ಸೂಚಕ ಸಭೆ
0
ಜುಲೈ 17, 2019