ಕಾಸರಗೋಡು: ಊರ ತಳಿ ಹಸುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಘೋಷಿಸಿರುವ ಕೌ ಸಕ್ರ್ಯೂಟ್ ಯೋಜನೆಯಲ್ಲಿ ಕಾಸರಗೋಡು ಗಿಡ್ಡ ಹಸುಗಳನ್ನೂ ಅಳಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಕುಂಬಳೆ ಗ್ರಾಮಪಂಚಾಯತ್ ನ್ನು ಕೇಂದ್ರೀಕರಿಸಿ ಸಕ್ರ್ಯೂಟ್ ಯೋಜನೆಯ ಚಟುವಟಿಕೆಗಳು ಆರಂಭಗೊಳ್ಳಳಿವೆ. ಬೇಳದಲ್ಲಿರುವ ಊರ ತಳಿ ಹಸುಗಳ ಸಂರಕ್ಷಣೆ ಕೇಂದ್ರದ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು.
ಜಿಲ್ಲೆಯಲ್ಲಿ ಗಿಡ್ಡ ಹಸುಗಳು ಅತ್ಯಧಿಕಪ್ರಮಾಣದಲ್ಲಿರುವ ಪ್ರದೇಶ ಕುಂಬಳೆಯಾಗಿದೆ. ಸರಾಸರಿ 90 ಸೆ.ಮೀ. ಉದ್ದ ಹೊಂದಿರುವ ಗಿಡ್ಡ ಕಾಸರಗೋಡಿನ ಸ್ವಂತ ಜಾನುವಾರು ತಳಿಯಾಗಿದೆ.

