ಕಾಸರಗೋಡು: ನಿನ್ನೆ (ಬುಧವಾರ)ಸಂಜೆ ವೇಳೆಗೆ ಎಲ್ಲೆಡೆ ವ್ಯಾಪಕ ಕಳವಳಕಾರಿ ವಿದ್ಯಮಾನ ಉಂಟಾಗಿದ್ದು, ಯುವ ಸಮೂಹ ಮೊಬೈಲ್ ಹಿಡಿದು ಅತ್ತಿತ್ತ ಓಡಾಡುವುದು,ಓಫ್-ಆನ್ ಮಾಡೋದು ಕಂಡುಬಂತು.
ಫೇಸ್‍ಬುಕ್ ಲೋಡ್ ಆಗ್ತಿಲ್ಲ...ವಾಟ್ಸಪ್‍ನಲ್ಲಿ ಬಂದ ಫೋಟೋ ಡೌನ್‍ಲೋಡ್ ಆಗ್ತಿಲ್ಲ...ಇನ್ ಸ್ಟಾಗ್ರಾಮ್ ರಿಫ್ರೆಶ್ ಆಗ್ತಿಲ್ಲ....ಎಂಬ ಅಸಮಧಾನಗಳು ಕೇಳಿಬಂದವು.
ಇದು ಬುಧವಾರ ಸಂಜೆ ಹಲವರಿಂದ ಕೇಳಿಬರುತ್ತಿರುವ ದೂರುಗಲಗಿತ್ತು. ಬುಧವಾರ ಸಂಜೆ ಪ್ರಸಿದ್ಧ ಸಾಮಾಜಿಕ ತಾಲತಾಣಗಳು ಡೌನ್ ಆಗಿದ್ದು ಜನರು ಫೋನ್ ಸರಿ ಇಲ್ಲವೇ ಎಂದು ಚೆಕ್ ಮಾಡಿಕೊಳ್ಳುವಂತೆ ಮಾಡಿದೆ. ಫೇಸ್‍ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಗಳು ವಿಶ್ವದಾದ್ಯಂತ ಡೌನ್ ಆಗಿದೆ. ಕೇರಳದ ಫೇಸ್ ಬುಕ್ ಪುಟದಲ್ಲಿ ಕನ್ನಡ ಸಾಲುಗಳು ಕಂಡುಬಂತು.
8.30ರ ಬಳಿಕ ಫೇಸ್‍ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಡೌನ್ ಆಗಿದ್ದು, ಫೇಸ್‍ಬುಕ್‍ನಲ್ಲಿ ಪೇಜ್ ಲೋಡ್ ಆಗುತ್ತಿರಲಿಲ್ಲ. ವಾಟ್ಸಪ್‍ನಲ್ಲಿ ಬಂದ ಚಿತ್ರಗಳು ಡೌನ್ ಲೋಡ್ ಆಗದೆ ಜನರು ಚಡಪಡಿಸಿದರು. ವಿಶ್ವದಾದ್ಯಂತ ಡೌನ್ ಕುರಿತು ಹಲವು ದೂರುಗಳು ಕೇಳಿಬರುತ್ತಿವೆ.
ಜಗತ್ತಿನ ಅಮೆರಿಕ, ಲಂಡನ್, ಫ್ಲೋರಿಡಾ, ಬರ್ಲಿನ್, ದಕ್ಷಿಣ ಅಮೆರಿಕ ಮುಂತಾದ ಪ್ರದೇಶಗಳಲ್ಲಿ ಫೇಸ್‍ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಡೌನ್ ಆಗಿದೆ. ಭಾರತದಲ್ಲಿಯೂ ಸಂಜೆ 7.30ರ ಬಳಿಕ ಮೂರು ಸಾಮಾಜಿಕ ಜಾಲತಾಣಗಳು ಡೌನ್ ಆಗಿವೆ. ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ಸಹಿತ ಇತರ ಜಾಲತಾಣಗಳಲ್ಲೂ ಪೋಸ್ಟ್‍ಗಳು ರಿಫ್ರೆಶ್ ಆಗುತ್ತಿರಲಿಲ್ಲ. ಈ ಬಗ್ಗೆ ಬುಧವಾರ ರಾತ್ರಿ 12ರ ತನಕ ಹೆಚ್ಚಿನ ಮಾಹಿತಿಗಳು ತಿಳಿದುಬಂದಿಲ್ಲ. ಇಂದು ಈ ಬಗ್ಗೆ ಕಾರಣಗಳು, ವಿವರಣೆಗಳು ಲಭ್ಯವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.


