HEALTH TIPS

ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಗೆ ಕೆಲವು ಸೀಟುಗಳು ಲಭ್ಯ


             
     ಕಾಸರಗೋಡು: ಪೆರಿಯ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಗೆ ಕೆಲವು ಸೀಟುಗಳು ಲಭ್ಯವಿದೆ. ಇದಕ್ಕಾಗಿ ಸ್ಪಾಟ್ ಪ್ರವೇಶವನ್ನು 16.07.2019 ರಂದು ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ನಡುವೆ ಕಾಸರಗೋಡಿನ ಪೆರಿಯ ಕೇರಳ ಕೇಂದ್ರ ವಿಶ್ವವಿದ್ಯಾಲಯ ಕ್ಯಾಂಪಸ್‍ನ ಗಂಗೋತ್ರಿ ಬ್ಲಾಕ್‍ನಲ್ಲಿ ವರದಿ ಮಾಡಬಹುದು.
     ಅಭ್ಯರ್ಥಿಗಳು ನೋಂದಣಿ ಶುಲ್ಕಕ್ಕೆ ರೂ.800 ನ್ನು ಪಾವತಿಸಬೇಕಾಗುತ್ತದೆ. ಇತರ ವಿವರಗಳು ವಿಶ್ವವಿದ್ಯಾಲಯದ ವೆಬ್‍ಸೈಟ್   ನಲ್ಲಿ ಲಭ್ಯವಿದೆ
     ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಶೇ.50 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಅಥವಾ ಸಮಾನ ಶ್ರೇಣಿಯನ್ನು ಹೊಂದಿರಬೇಕು ಮತ್ತು ಕನ್ನಡದಲ್ಲಿ ಪದವಿಪೂರ್ವ ಮಟ್ಟದಲ್ಲಿ ಐಚ್ಛಿಕ ವಿಷಯ ಅಥವಾ ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕಗಳ ಅಗತ್ಯದಲ್ಲಿ ಶೇ.5 ವರೆಗೆ ವಿನಾಯಿತಿ ನೀಡಲಾಗುತ್ತದೆ.
          ವಯಸ್ಸಿನ ಮಿತಿ : 01.07.2019 ರಂದು 25 ವರ್ಷಗಳಿಗಿಂತ ಹೆಚ್ಚಿರಬಾರದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries