ಕಾಸರಗೋಡು: ಇಂಧನ ಬೆಲೆ ಏರಿಕೆ ಜನಸಾಮಾನ್ಯರಿಗೆ ಬಹುದೊಡ್ಡ ಸಮಸ್ಯೆಯಾಗಲಿದೆ. ಇಂಧನ ಬೆಲೆ ಏರಿಕೆಯಿಂದ ಎಲ್ಲ ಸಾಮಾಗ್ರಿಗಳ ಬೆಲೆಯೂ ಏರಿಕೆಯಾಗಲಿದ್ದು ಈ ತೀರ್ಮಾನವನ್ನು ಮರುಪರಿಶಿಲಿಸಬೇಕು ಎಂದು ಯೂತ್ ಕಾಂಗ್ರೆಸ್ ಕಾಸರಗೋಡು ಪಾರ್ಲಿಮೆಂಟ್ ಕಾರ್ಯದರ್ಶಿ ಮುಹಮ್ಮದ್ ಆರಿಸ್ ಶೇಣಿ ಆಗ್ರಹಿಸಿದ್ದಾರೆ. ಜಿಲ್ಲೆಯ ಬಹುತೇಕ ಜನಸಾಮಾನ್ಯರು ಆಟೋಚಾಲಕರಾಗಿಯೂ, ಇತರ ಟ್ಯಾಕ್ಸಿ ಚಾಲಕರಾಗಿಯೂ ದುಡಿಯುವವರಾಗಿದ್ದಾರೆ. ಈಗಾಗಲೇ ಬಾಡಿಗೆ ಲಭಿಸದೆ ವಾಹನ ಸಾಲ ತೀರಿಸಲಾಗದೆ ಕಷ್ಟಪಡುತ್ತಿರುವ ಇವರಿಗೆ ಇಂಧನ ಬೆಲೆ ಏರಿಕೆ ತಿರುಗೇಟಾಗಿ ಪರಿಣಮಿಸಲಿದೆ. ತರಕಾರಿ, ಹಣ್ಣುಹಂಪಲುಗಳ ಬೆಲೆಯಲ್ಲಿ ಕೂಡಾ ಹೆಚ್ಚಳ ಉಂಟಾಗಲಿದ್ದು ಜನಸಾಮಾನ್ಯರ ದಿನನಿತ್ಯದ ಖರ್ಚು ಇಮ್ಮಡಿಯಾಗಲಿದೆ. ಈಗಾಗಲೇ ಜಿಎಸ್‍ಟಿ ಇತ್ಯಾದಿ ಕಾರಣಗಳಿಂದ ದುಪ್ಪಟ್ಟು ಹಣ ನೀಡಿ ಖರೀದಿಸಬೇಕಾದ ಸಾಮಾಗ್ರಿಗಳಿಗೆ ಇನ್ನಷ್ಟು ಹೆಚ್ಚು ಹಣ ನೀಡಿ ಖರೀದಿಸಬೇಕಾದ ದುಸ್ಥಿತಿ ಜನಸಾಮಾನ್ಯರನ್ನು ಬಡತನದ ಕೂಪಕ್ಕೆ ತಳ್ಳಲಿದೆ. ಆದುದರಿಂದ ಜನಸಾಮಾನ್ಯರ ಸಮಸ್ಯೆಗಳನ್ನು ಮನದಟ್ಟು ಮಾಡಿ ಸರಕಾರದ ಈ ತೀರ್ಮಾನವನ್ನು ಮರುಪರಿಶೀಲಸಬೇಕು ಎಂದು ಯೂತ್ ಕಾಂಗ್ರೆಸ್ ಕಾಸರಗೋಡು ಪಾರ್ಲಿಮೆಂಟ್ ಕಾರ್ಯದರ್ಶಿ ಮುಹಮ್ಮದ್ ಆರಿಸ್ ಶೇಣಿ ಆಗ್ರಹಿಸಿದ್ದಾರೆ.
ಇಂಧನ ಬೆಲೆ ಏರಿಕೆ ಮರುಪರಿಶೀಲಿಸಲು ಆಗ್ರಹ
0
ಜುಲೈ 12, 2019