ಕಾಸರಗೋಡು: ಉತ್ತಮ ಸಮಾಜ ನಿರ್ಮಾಣಕ್ಕೆ ಕೌಟುಂಬಿಕ ಸಂಬಂಧಗಳು ಬಲಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಷಾಹಿದಾ ಕಮಾಲ್ ಅಭಿಪ್ರಾಯಪಟ್ಟರು.
ರಾಜ್ಯ ಮಹಿಳಾ ಆಯೋಗ, ತ್ರಿವೇಣಿ ಆಟ್ರ್ಸ್ ಆ್ಯಂಡ್ ಸಯನ್ಸ್ ಕಾಲೇಜ್ ಜಂಟಿ ವತಿಯಿಂದ ತ್ರಿವೇಣಿ ಕಾಲೇಜಿನಲ್ಲಿ ನಡೆದ ಮಹಿಳಾ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಜನಾಂಗ ನಾಳೆಯ ನಿರೀಕ್ಷೆಯಾಗಿದ್ದಾರೆ. ಕೌಟುಂಬಿಕ ಸಂಬಂಧಗಳ ಮೌಲ್ಯಗಳ ಮತ್ತು ಮಹತ್ವದ ಬಗ್ಗೆ ಯುವಜನತೆ ಅರಿತುಕೊಳ್ಳಬೇಕು. ಕುಟುಂಬದೊಂದಿಗೆ ಸೇರಿದ್ದಾಗಲೇ ಬದುಕು ಪೂರ್ಣವಾಗಲಿದೆ. ನಮ್ಮ ತಳಹದಿ ಸಡಿಲವಾಗಬಾರದು. ಕೌಟುಂಬಿಕ ಜೀವನ ಬಲುಬೇಗ ಶಿಥಿಲಗೊಳ್ಳುತ್ತಿರುವುದು ಇಂದಿನ ದುರಂತ. ಈ ನಿಟ್ಟಿನಲ್ಲಿ ಶಿಕ್ಷಣಾಲಯಗಳಲ್ಲಿ ಈ ಬಗ್ಗೆ ಜಾಗೃತಿಮೂಡಿಸುವ ವಿಚಾರಸಂಕಿರಣ ಸಹಿತ ಕಾರ್ಯಕ್ರಮಗಳೂ ನಡೆಯಬೇಕು ಎಂದವರು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಪೆÇ್ರ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಮುಖ್ಯ ಅತಿಥಿಯಾಗಿದ್ದರು. ಆಡಳಿತಾ„ಕಾರಿ ವಿಜಯನ್ ನಂಬ್ಯಾರ್, ಉಪನ್ಯಾಸಕಿ ಇ.ರಮಣಿ, ಟ್ರೈನರ್ ಫಹದ್ ಸಲೀಂ ಮೊದಲಾದವರು ಉಪಸ್ಥಿತರಿದ್ದರು.


