ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜ್ಯ ಮಹಿಳಾ ಆಯೋಗ ಅಹವಾಲು ಸ್ವೀಕಾರ ಸಭೆಯಲ್ಲಿ 43 ಕೇಸುಗಳನ್ನು ಪರಿಶೀಲಿಸಲಾಗಿತ್ತು. 9 ದೂರುಗಳಿಗೆ ತೀರ್ಪು ಒದಗಿಸಲಾಗಿದೆ. ಮೂರು ದೂರುಗಳಲ್ಲಿ ಪೆÇಲೀಸ್, ಉದ್ಯೋಗ ಇಲಾಖೆಗಳಿಂದ ಸ್ಪಷ್ಟೀಕರಣ ಬಯಸಲಾಗಿದೆ. 31 ದೂರುಗಳನ್ನು ಮುಂದಿನ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.
ಆಯೋಗ ಸದಸ್ಯರಾದ ಷಾಹಿದಾ ಕಮಾಲ್, ಇ.ಎಂ.ರಾಧಾ, ಸೀನಿಯರ್ ಸುಪರಿಟೆಂಡೆಂಟ್ ಜೈಮೋನ್ ಎ.ಜಾನ್, ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್, ಲೀಗಲ್ ಪ್ಯಾನೆಲ್ ಸದಸ್ಯರಾದ ನ್ಯಾಯವಾದಿ ಎ.ಪಿ.ಉಷಾ, ನ್ಯಾಯವಾದಿ ಎಸ್.ಎನ್.ಸರಿತಾ, ಮಹಿಳಾ ಘಟಕ ಎಸ್.ಐ. ಎಂ.ಎ.ಶಾಂತಾ, ಸಿ.ಪಿ. ಒ.ಪಿ.ಶೀಲಾ, ಕ್ಲರ್ಕ್ ಅಮಲ್ ಮಿತ್ರ ಮೊದಲಾದವರು ಉಪಸ್ಥಿತರಿದ್ದರು.


