ಕಾಸರಗೋಡು: ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾನೂನು ಬಲಪಡಿಸಲಾಗುವುದು ಎಂದು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯರಾದ ಷಾಹಿದಾ ಕಮಾಲ್ ಮತ್ತು ಇ.ಎಂ.ರಾಧಾ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಯೋಗದ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಲಕ್ಕೆ ತಕ್ಕಂತೆ ಕಾನೂನಿನಲ್ಲಿಯೂ ಬದಲಾವಣೆ ತರಬೇಕು. ಪುರುಷ ಮತ್ತು ಸ್ತ್ರೀಯ ಸೌಹಾರ್ದತೆಗೆ ಬಿರುಕು ತರುವ ರೀತಿ ಕೆಲವೆಡೆ ನಡೆಸಲಾಗುತ್ತಿರುವ ಚಿತ್ರಣ ಮಾನಸಿಕ ವಿಕೃತಿಯ ಪರಿಣಾಮ. ವ್ಯಕ್ತಿತ್ವ ವಿಕಸನ, ಬದುಕಿನ ಶಿಕ್ಷಣಕ್ಕೆ ಪೂರಕವಾದ ವಿಷಯಗಳು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು.
ಆಯೋಗಕ್ಕೆ ಲಭಿಸುವ ದೂರುಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ತಿಳಿಸಿದ ಅವರು ಕುಟುಂಬ ಎಂಬುದು ಸಮಾಜದ ಮೂಲಭೂತ ಘಟಕವಾಗಿದೆ. ಕೌಟುಂಬಿಕ ಸಂಬಂಧಗಳ ಬಿರುಕು ಗಳನ್ನು ಸರಿಪಡಿಸುವಲ್ಲಿ ಆಯೋಗದ ಮಧ್ಯಸ್ಥಿಕೆ ಪೂರಕವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಆಯೋಗದ ಚಟುವಟಿಕೆಗಳಿಗೆ ಜಿಲ್ಲಾ„ಕಾರಿ ಅವರ ಬೆಂಬಲ ಉತ್ತಮವಾಗಿದೆ. ಆಯೋಗದ ತೀರ್ಪು ಯಥಾವತ್ತಾಗಿ ಜಾರಿಗೊಳಿಸುವಲ್ಲಿ ಸಿಬ್ಬಂದಿಯ ಬೆಂಬಲ ಪೂರಕವಾಗಿದೆ. ಮಾಧ್ಯಮಗಳೂ ಆಯೋಗವನ್ನೂ ಪೂರ್ಣ ರೂಪದಲ್ಲಿ ಬೆಂಬಲಿಸುತ್ತಾ ಬಂದಿವೆ. ಇವೆಲ್ಲವೂ ದೂರು ಕಡಿಮೆಯಾಗಲು ಕಾರಣವಾಗಿವೆ ಎಂದವರು ತಿಳಿಸಿದರು.
ಈ ವರೆಗೆ ಲಭಿಸಿದ ಎಲ್ಲ ದೂರುಗಳಿಗೂ ತೀರ್ಪು ನೀಡಲಾಗಿದೆ. ನೂತನವಾಗಿ ಕೇವಲ ಎರಡು ದೂರುಗಳು ಸಿಕ್ಕಿವೆ ಎಂದವರು ಹೇಳಿದರು.


