ಕಾಸರಗೋಡು: ಭೂಗರ್ಭ ಜಲದ ಮಟ್ಟ ಅಪಾಯಕಾರಿ ರೀತಿಯಲ್ಲಿ ಕೆಳಮುಖ ಕಾಣುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಲಸಂರಕ್ಷಣೆ ಚಟುವಟಿಕೆ ರಚಿಸುವ ನಿಟ್ಟಿನಲ್ಲಿ ಜಲಶಕ್ತಿ ಅಭಿಯಾನ್ ಯೋಜನೆ ಪ್ರಕಾರ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು.
ಡಿ.ಪಿ.ಸಿ.ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಅ„ಕ ನದಿಗಳನ್ನು ನಮ್ಮ ಜಿಲ್ಲೆ ಹೊಂದಿದ್ದೂ ಜಲಕ್ಷಾಮ ತಲೆದೋರಿರುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಮತ್ತು ಇದರ ಪರಿಹಾರಕ್ಕೆ ಸರ್ವ ಯತ್ನ ನಡೆಸಬೇಕಾದ ಸ್ಥಿತಿ ಇದೆ. ಜಲಸಂರಕ್ಷಣೆ ವಿಚಾರದಲ್ಲಿ ಇನ್ನೂ ಅಸಡ್ಡೆ ತೋರಿದರೆ ಮುಂದಿನ ತಲೆಮಾರು ಕೇಳಬಹುದಾದ ಪ್ರಶ್ನೆಗೆ ಉತ್ತರಿಸಲು ಪರದಾಡಬೇಕಾದೀತು. ಜಲಸಂರಕ್ಷಣೆಗೆ ವಿವಿಧ ಯೋಜನೆಗಳು ಇವೆಯಾದರೂ, ನಿ„ಯ ಕೊರತೆಯಿಂದ ಪರಿಣಾಮಕಾರಿಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಲಶಕ್ತಿ ಅಭಿಯಾನ್ ಮೂಲಕ ರಚನೆಗೊಳ್ಳುವ ಜಲನೀತಿ ನೂತನ ನಿರೀಕ್ಷೆಯಾಗಿದ್ದು, ಇದರ ಯಶಸ್ಸಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರ ಅಗತ್ಯ ಎಂದು ನುಡಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಜಲಶಕ್ತಿ ಯೋಜನೆ ಕುರಿತು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು ಜಿಲ್ಲೆಯಲ್ಲಿ ತಲೆದೋರಿದ ಜಲಕ್ಷಾಮಕ್ಕೆ ತುರ್ತು ಪರಿಹಾರ ಕಂಡುಕೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ನಮ್ಮನಾಡು ಮರುಭೂಮಿಯಾಗುವ ಭೀತಿಯಿದೆ. ಸಾಮಾಜಿಕ ಭದ್ರತೆಯ ತಳಹದಿ ಜಲಸಂರಕ್ಷಣೆಯಾಗಿ ಮಾರ್ಪಟ್ಟಿದ್ದು, ಈ ಮೂಲಕ ಆಹಾರ ಸುರಕ್ಷೆ, ಆರ್ಥಿಕ ಸುರಕ್ಷೆ ಮತ್ತು ಸಮಾಜ ಸುರಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.
ಜಲಶಕ್ತಿ ಅಭಿಯಾನ್ ಯೋಜನೆಗೆ ಪೂರಕವಾಗಿ ಜಿಲ್ಲೆಯಲ್ಲಿ ಬ್ಯಾಂಬೂ ಕ್ಯಾಪಿಟಲ್ ಯೋಜನೆ ಮತ್ತು ಜಲವೇ ಜೀವನ ಯೋಜನೆಗಳೂ ಪೂರಕವಾಗಿವೆ. ಯೋಜನೆಯ ಮೊದಲ ಹಂತವಾಗಿ ಮಂಜೇಶ್ವರ ಬ್ಲಾಕ್‍ನ 5 ನದಿಗಳು ವೈಜ್ಞಾನಿಕ ಅಧ್ಯಯನ ನಡೆಸಿ, ಅದರ ಆಧಾರದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು. ಜಲನೀತಿಯ ಆಧಾರದಲ್ಲಿ ಪಂಚಾಯತ್-ಬ್ಲಾಕ್-ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ರಚಿಸಲಾಗುವ ಯೋಜನೆಗಳು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಕೇಂದ್ರ-ರಾಜ್ಯ ಸರಕಾರಗಳ ವಿವಿಧ ನಿ„ಗಳಿಂದ ಯೋಜನೆಗೆ ಬೇಕಾದ ನಿ„ ಕಂಡುಕೊಳ್ಳಲಾಗುವುದು ಎಂದವರು ತಿಳಿಸಿದರು.
ಯೋಜನೆಯ ಜಿಲ್ಲಾ ನೋಡೆಲ್ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ಜಲನೀತಿಯ ರೂಪುರೇಷೆ ಪ್ರಸ್ತುತಪಡಿಸಿದರು. ವಿವಿಧ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಸಿ.ಎಚ್.ಮಹಮ್ಮದ್ ಕುಂಞÂ ಚಾಯಿಂಡಡಿ, ಎ.ಕೆ.ಎಂ.ಅಶ್ರಫ್, ಗೌರಿ, ಓಮನಾ ರಾಮಚಂದ್ರನ್, ಜಲಶಕ್ತಿ ಅಭಿಯಾನ್ ತಾಂತ್ರಿಕ ಸಹಾಯಕಿ ವಿ.ಆರ್.ರಾಣಿ, ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮ ಸಂಯೋಜಕ ಕೆ.ಪ್ರದೀಪ್, ಎ.ಡಿ.ಸಿ. ಜನರಲ್ ಬೆವಿನ್ ಜಾನ್ ವರ್ಗೀಸ್, ಸಿ.ಪಿ.ಸಿ.ಆರ್.ಐ. ಕೃಷಿ ವಿಜ್ಞಾನ ಕೇಂದ್ರ ಪೆÇ್ರೀಗ್ರಾಂ ಕೋ-ಆರ್ಡಿನೇಟರ್ ಡಾ.ಟಿ.ಕೆ.ಮನೋಜ್ ಕುಮಾರ್, ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಬಳಿಕ ಕಾಸರಗೋಡು ಬ್ಲಾಕ್‍ನ ಮಧೂರು, ಕುಂಬಳೆ, ಮೊಗ್ರಾಲ್ ಪುತ್ತೂರು, ಚೆಮ್ನಾಡ್, ಬದಿಯಡ್ಕ, ಚೆಂಗಳ ಪಂಚಾಯತ್‍ಗಳ ಗುಂಪು ಚರ್ಚೆ ನಡೆದು ಅಭಿಮತ ಕ್ರೋಡೀಕರಿಸಲಾಯಿತು. ಕಾಸರಗೋಡು, ಮಂಜೇಶ್ವರ, ಕಾಂಞಂಗಾಡ್, ಕಾರಡ್ಕ ಬ್ಲಾಕ್‍ಗಳ ಗ್ರಾಮ ಪಂಚಾಯತ್ ಅಧ್ಯಕ್ಷರು, ಕೃಷಿ ಅ„ಕಾರಿಗಳು, ಬ್ಲಾಕ್ ಪಂಚಾಯತ್ ಕಾರ್ಯದರ್ಶಿಗಳು, ಗ್ರಾಮ-ಬ್ಲಾಕ್-ಜಿಲ್ಲಾ ಮಟ್ಟದ ಜಲಸಂರಕ್ಷಣೆ ಸಮಿತಿ ಸದಸ್ಯರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಜಲಶಕ್ತಿ ಅಭಿಯಾನ್ : ಜಲವಿನಿಮಯ ನೀತಿ ರೂಪುರೇಷೆ
ಜಲಶಕ್ತಿ ಅಭಿಯಾನ್ ಯೋಜನೆಯ ಜಲ ವಿನಿಮಯ ನೀತಿಯ ರೂಪುರೇಷೆ ಸಿದ್ಧವಾಗಿದೆ. ಡಿ.ಪಿ.ಸಿ. ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಯೋಜನೆಯ ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿ, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ರೂಪುರೇಷೆ ಪ್ರಸ್ತುತಪಡಿಸಿದರು.
ಜಲಸಂರಕ್ಷಣೆ, ಮಳೆ ನೀರು ಸಂಗ್ರಹ, ಪರಂಪರಾಗತ ಜಲಾಶಯಗಳ ನವೀಕರಣ, ಅರಣ್ಯೀಕರಣ, ನೀರಾವರಿ ಅಭಿವೃದ್ಧಿ, ಜನಜಾಗೃತಿ ಕಾರ್ಯಕ್ರಮಗಳು ಎಂಬ 5 ವಲಯಗಳಲ್ಲಿ ಜಲ ವಿನಿಮಯ ನೀತಿಯ ರೂಪುರೇಷೆ ಸಿದ್ಧವಾಗಿದೆ.
ಮೂಲಭೂತ ಅಭಿವೃದ್ಧಿ ಚಟುವಟಿಕೆಗಳು : ನೀತಿಯ ರೂಪುರೇಷೆ ಪ್ರಕಾರ ಜಲಸಂರಕಷಣೆ ಚಟುವಟಿಕೆಗಳಿಗಿರುವ ಮೂಲಭೂತ ಅಭಿವೃದ್ಧಿ ಯೋಜನೆಗೆ ಆದ್ಯತೆ ನೀಡಲಾಗುವುದು. ಇದರ ಅಂಗವಾಗಿ ಜಿಲ್ಲೆಯ ಪ್ರಧಾನ ನದಿಗಳಲ್ಲಿ ಕಿಫ್ಬಿಯ ಸಹಾಯದೊಂದಿಗೆ ರೆಗ್ಯುಲೇಟರ್ ಕಂ ಬ್ರಿಜ್ಡ್ ನಿರ್ಮಿಸಲಾಗುವುದು. ಜಲದ ಗುಣಮಟ್ಟ ಅಳೆಯುವ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆಯ ವಿವಿಧ ವಲಯಗಳಲ್ಲಿ ಪ್ರತ್ಯೇಕ ಅಳತೆಗಳಲ್ಲಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು 5 ಕೃಷಿ - ಪರಿಸರ ವಲಯಗಳಾಗಿ ವಿಂಗಡಿಸಿ ಹವಾಮಾನ ನಿಗಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಭೂಗರ್ಭಜಲ ಲಭ್ಯತೆ ಅರಿಯುವ ಶಾಶ್ವತ ಸೌಲಭ್ಯ ಏರ್ಪಡಿಸಲಾಗುವುದು.
ನಿರ್ವಹಣೆ ಚಟುವಟಿಕೆಗಳು : ನದಿಜಲವನ್ನು ಪರಿಣಾಮಕಾರಿಯಾಗಿ ಬಳಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಿ, ಜಲಾಶಯಗಳ ಮ್ಯಾಚಿಂಗ್ ನಡೆಸಲಾಗುವುದು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಜಲಕ್ಷಾಮ ತೀವ್ರವಾಗಿರುವ ಬ್ಲಾಕ್‍ಗಳ ಜಲಸಂರಕ್ಷಣೆ ಚಟುವಟಿಕೆಗಳಿಗೆ ಮತ್ತು ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು. ಕೃಷಿಗೆ ಸಂಬಂ„ಸಿದ ಚಟುವಟಿಕೆಗಳಿಗೆ ಗ್ರಾಮ-ಬ್ಲಾಕ್ ಪಂಚಾಯತ್ ಮಟ್ಟದಲ್ಲಿ ಕಿರು ನೀರಾವರಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ನೌಕರಿ ಖಾತರಿ ಯೋಜನೆಯ ಸಹಕಾರ ಇದಕ್ಕಾಗಿ ಪಡೆಯಲಾಗುವುದು. ಸಂಯೋಜಿತ ಕೃಷಿ ರೀತಿಗಳಿಗೆ ಬೆಂಬಲ ನೀಡಲಾಗುವುದು.
ಕುಟುಂಬಶ್ರೀ, ಹರಿತ ಕೇರಳಂ ಮಿಷನ್, ನೆಹರೂ ಯುವ ಕೇಂದ್ರ, ವಿದ್ಯಾರ್ಥಿಗಳು ಮೊದಲಾದವರ ಸಹಕಾರದೊಂದಿಗೆ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಅರಣ್ಯ ವಲಯದಲ್ಲಿ ಶೇ.3ರಿಂದ ಶೇ 10 ಹೆಚ್ಚಳವುಂಟಾಗಲು ಬೇಕಾದ ಕ್ರಮ ಕೈಗೊಳ್ಳಲಾಗುವುದು.
ಅತಿ ಜಲ ಹೀರುವ ಮರಗಳನ್ನು ಕಡಿದು ತೆರವುಗೊಳಿಸಿ, ಕಡಿಮೆ ನೀರು ಬಳಸಿಕೊಳ್ಳುವ ಮರಗಳಾಗುವ ಸಸಿಗಳನ್ನು ನೆಡಲಾಗುವುದು. ಲ್ಯಾಟರೈಟ್ ವಲಯದ ಮಣ್ಣನ್ನು ಸತ್ವಯುತಗೊಳಿಸುವ ನಿಟ್ಟಿನಲ್ಲಿ ಸರಕಾರಿ-ಖಾಸಗಿ ಜಾಗಗಳಲ್ಲಿ ಬಿದಿರು ಕೃಷಿ ನಡೆಸಲಾಗುವುದು. ಜಲಾಶಯಗಳ ಮಾಹಿತಿ ಸಂಗ್ರಹಿಸಲಾಗುವುದು. ಇನ್ನು ಮುಂದೆ ನಡೆಸಲಾಗುವ ಚೆಕ್ ಡ್ಯಾಂಗಳ ನಿರ್ಮಾಣ ಸಮಗ್ರ ಪ್ರಾಜೆಕ್ಟ್ ರಿಪೆÇೀರ್ಟ್‍ಗಳ ತಳಹದಿಯಲ್ಲಿ ನಡೆಯಲಿದೆ. ನದಿತಟಗಳಲ್ಲಿ, ಕಡಲತೀರಗಳಲ್ಲಿ ಪ್ರಕೃತಿಗೆ ಪೂರಕವಾದ ತಡೆ ಮಾರ್ಗಗಳನ್ನು ಬಳಸಲಾಗುವುದು.
ಜಲಕ್ಷಾಮ ತೀವ್ರವಾಗಿರುವ ಕಾಸರಗೋಡು, ಮಂಜೇಶ್ವರ, ಕಾಂಞಂಗಾಡ್ ಬ್ಲಾಕ್‍ಗಳಲ್ಲಿ ಭೂಗರ್ಭ ಜಲ ರೀಚಾರ್ಜ್ ನಡೆಸುವ ನಿಟ್ಟಿನಲ್ಲಿ ಮೂರು ವರ್ಷದ ಅವಧಿಯಲ್ಲಿ ಸಾವಿರಾರು ಕಿರು ಕೆರೆಗಳನ್ನು ನಿರ್ಮಿಸಲಾಗುವುದು. ಉಪಯೋಗವಿಲ್ಲದೇ ಇರುವ ಕೋರೆಗಳನ್ನು, ಬಾವಿಗಳನ್ನು ನೀರು ರೀಚಾರ್ಜ್ ನಡೆಸಲು ಬಳಸಲಾಗುವುದು. ನೈಸರ್ಗಿಕ ಜಲಾಶಯಗಳಾದ ಹಳ್ಳಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಲಾಗುವುದು. ಕೃಷಿ ವಲಯದ ನೀರಾವರಿಗಾಗಿ ಸ್ಪಿಂಕ್ಲರ್‍ಗೆ ಬದಲಾಗಿ ಹನಿನೀರು ನೀರಾವರಿ ಸೌಲಭ್ಯ ಹೆಚ್ಚಳಗೊಳಿಸಲಾಗುವುದು. ಮಾದರಿ ರೂಪದ ಜಲಸಂರಕ್ಷಣೆ ಚಟುವಟಿಕೆ ನಡೆಸಿದ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುವುದು.
ನಿಯಂತ್ರಣ ಚಟುವಟಿಕೆಗಳು : ಕೃಷಿ ಅಗತ್ಯಗಳಿಗೆ ಮತ್ತಿತರ ಅಗತ್ಯಗಳಿಗೆ ನದಿಗಳಿಂದ ನೇರವಾಗಿ ನೀರೆತ್ತುವುದನ್ನು ನಿಯಂತ್ರಿಸಲಾಗುವುದು. ಜಲಕ್ಷಾಮ ತೀವ್ರವಾಗಿರುವ ಬ್ಲಾಕ್‍ಗಳಲ್ಲಿ ಕೊಳವೆ ಬಾವಿ ನಿರ್ಮಾಣ ನಿಯಂತ್ರಣ ಕಡ್ಡಾಯಗೊಳಿಸಲಾಗುವುದು. ಇತರ ಬ್ಲಾಕ್‍ಗಳಲ್ಲೂ ನಿಯಂತ್ರಣದ ಕ್ರಮಕೈಗೊಳ್ಳಲಾಗುವುದು. ಮಳೆ ನೀರು ಸಂಗ್ರಹಕ್ಕೆ ರೀಚಾರ್ಜ್ ಸೌಲಭ್ಯಗಳಿರುವ ಕಟ್ಟಡಗಳಿಗೆ ಮಾತ್ರ ಕಟ್ಟಡ ಪರವಾನಗಿ ಮಂಜೂರು ಮಾಡಲಾಗುವುದು. ಬಿಂದು ನೀರಾವರಿ ಸೌಲಭ್ಯವಿರುವವರಿಗೆ ಮಾತ್ರ ಕೃಷಿ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ಉತ್ಖನನ ಚಟುವಟಿಕೆಗಳ ಬಗ್ಗೆ ಕಡ್ಡಾಯ ನಿಗಾ ಇರಿಸಲಾಗುವುದು. ತ್ಯಾಜ್ಯ ಪರಿಷ್ಕರಣೆಗೆ ಹಸುರು ಸಂಹಿತೆ ಹೇರಲಾಗುವುದು. ಅತಿ ಜಲ ಬಳಕೆ ನಡೆಸುವ ಉದ್ದಿಮೆದಾರರಿಗೆ ಜಿಲ್ಲೆಯಲ್ಲಿ ನಿಯಂತ್ರಣ ಹೇರಲಾಗುವುದು.
(ಚಿತ್ರ ಮಾಹಿತಿ : ಡಿ.ಪಿ.ಸಿ. ಸಭಾಂಗಣದಲ್ಲಿ ನಡೆದ ಜಲಶಕ್ತಿ ಅಭಿಯಾನ್ ಕಾರ್ಯಾಗಾರದಲ್ಲಿ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಮಾತನಾಡಿದರು.)


