ಕಾಸರಗೋಡು: ಬಿರುಸಿನ ಗಾಳಿಮಳೆ ಸುರಿಯುವ ಹಿನ್ನೆಲೆಯಲ್ಲಿ ಇಂದು(ಜು.21) ಕೂಡ ಜಿಲ್ಲೆಯಲ್ಲಿ ರೆಡ್ ಅಲೆರ್ಟ್ ಘೋಷಿಸಲಾಗಿದೆ.
ಕಾಸರಗೋಡು, ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಘೋಷಿಸಲಾಗಿದೆ. ಜು.22ರಂದು ಮಲಪ್ಪುರಂ, ಕೋಯಿಕೋಡ್,ವಯನಾಡ್, ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಘೋಷಿಸಲಾಗಿದೆ. ರೆಡ್ ಅಲೆರ್ಟ್ ಜಿಲ್ಲೆಗಳಲ್ಲಿ ಅತಿ ಬಿರುಸಿನ ಗಾಳಿಮಳೆಗೆ (24 ತಾಸುಗಳಲ್ಲಿ 204 ಮಿಮೀ ಗಿಂತಲೂ ಅಧಿಕ ಮಳೆ)ಸಾಧ್ಯತೆಯಿದೆ. ಸರಕಾರಿ ವ್ಯವಸ್ಥೆ, ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ, ಪುನರ್ವಸತಿ ಶಿಬಿರಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ರೆಡ್ ಅಲೆರ್ಟ್ ಘೋಷಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಬಿರುಸಿನ ಮಳೆಗೆ ಸಾಧ್ಯತೆಗಳಿದ್ದು, ನೆರೆ ಸಹಿತ ಪ್ರಕೃತಿವಿಕೋಪಗಳು ತಲೆದೋರುವ ಭೀತಿಯಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಎತ್ತರದ ತೆರೆ ಸಾಧ್ಯತೆ:
ಇಂದು(ಜು.21) ರಾತ್ರಿ 11.30 ವರೆಗೆ ಪೊಳಿಯೂರಿನಿಂದ ಕಾಸರಗೋಡು ವರೆಗೆ ಕಡಲತೀರದಲ್ಲಿ 3.5 ರಿಂದ 4.3 ಮೀಟರ್ ವರೆಗೆ ಎತ್ತರದ ತೆರೆಗಳು ಏಳುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಸಮುದ್ರ ಸ್ಥಿತಿ ನಿಗಾ ಕೇಂದ್ರ ತಿಳಿಸಿದೆ.
ಬಿರುಸಿನ ಗಾಳಿ ಸಾಧ್ಯತೆ:
ಕೇರಳ ಕಡಲತೀರಗಳಲ್ಲಿ ಪಶ್ಚಿಮದಿಕ್ಕಿನಿಂದ ತಾಸಿಗೆ 40ರಿಂದ 50 ಕಿಮೀ ವರೆಗೆ ವೇಗದಲ್ಲಿ ಗಾಳಿ ಬೀಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ತೆರಳಕೂಡದು ಎಂದು ಕೇಂದ್ರ ಹವಾಮಾನ ವರದಿ ತಿಳಿಸಿದೆ.
ಜು.24 ವರೆಗೆ ಇದೇ ಸ್ಥಿತಿ ಇದ್ದು, ಉತ್ತರ,ಪಶ್ಚಿಮ, ಮಧ್ಯ ಪಶ್ಚಿಮ ಅರೆಬಿ ಸಮುದ್ರದಲ್ಲಿ ಬಿರುಸಿನಗಾಳಿಬೀಡುವಸಾಧ್ಯತೆಯ ಹಿನ್ನೆಲೆಯಲ್ಲಿ ಕಡಲ್ಕೊರೆತವೂ ತೀವ್ರಗೊಳ್ಳುವಸಾಧ್ಯತೆಯಿದ್ದು, ಮೀನುಗಾರರು ಕಡಲಿಗೆ ತೆರಳಕೂಡದು ಎಂದು ತಿಳಿಸಲಾಗಿದೆ.

