ಕಾಸರಗೋಡು: ಬಿರುಸಿನ ಮಳೆಗಾಲದಲ್ಲಿ ಕುಡಿಯುವನೀರು, ಪರಿಸರ ತ್ಯಾಜ್ಯಯುಕ್ತ ವಾಗುವ ಹಿನ್ನೆಲೆಯಲ್ಲಿ ಹರಡಬಹುದಾದ ಅಂಟುರೋಗಗಳ ಬಗ್ಗೆ ಸಾರ್ವಜನಿಕರು ಜಾಗರೂಕತೆಯಿಂದ ಇರುವಂತೆ ಆರೋಗ್ಯ ಇಲಾಖೆ ಸಲಹೆ ಮಾಡಿದೆ.
ಕಾಲರಾ, ಹಳದಿಜ್ವರ, ಆನೆಕಾಲು, ಇಲಿಜ್ವರ, ಜಲೋದರ ಸಹಿತ ರೋಗಗಳುಕಾಡುವ ಭೀತಿಯಿದೆ. ಬಾವಿ,ಕೊಳವೆ ಬಾವಿನೋರನ್ನುಕ್ಲೋರಿಂಗ್ ನಡೆಸಬೇಕು. ಕುದಿಸಿ ತಣಿಸಿದ ನೀರನ್ನು ಕುಡಿಯಬೇಕು. ಆಹಾರ,ನೀರಿನಪಾತ್ರೆ ಮುಚ್ಚಿಡಬೇಕು. ತರಕಾರಿ,ಹಣ್ಣುಗಳುಇತ್ಯಾದಿಗಳನ್ನು ಚೆನ್ನಾಗಿತೊಳೆದು ಸೇವಿಸಬೇಕು. ಮಲಿನಜಲವಿರುವ ಹಾದಿಯಲಿ ತೆರಳಬಾರದು. ವ್ಯಕ್ತಿಗತ ಶುಚಿತ್ವ ಪಾಲಿಸಬೇಕು. ಒದ್ದೆ ಬಟ್ಟೆ ಧರಿಸಬಾರದು. ತೋಟಗಳಲ್ಲಿ ಇತ್ಯಾದಿಕಡೆ ದುಡಿಯುವವರು ಪ್ರತಿರೋಧ ಗುಳಿಗೆಗಳನ್ನು ಸೇವಿಸಬೇಕು. ಇಲಿಜ್ವರದ ಪ್ರತಿರೋಧ ಗುಳಿಗೆಗಗಳು ಸರಕಾರಿ ಆಸ್ಪತ್ರೆಗಳಲ್ಲಿ ಪ್ರತಿರೋಧ ಗುಳಿಗೆಗಳು ಲಭ್ಯವಿವೆ. ನೀರು ಕಟ್ಟಿನಿಲ್ಲದಂತೆ ನೋಡಿಕೊಳ್ಳಬೇಕು. ಯಾವುದೇ ಜ್ವರದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಸಲಹೆ ಮಾಡಿದ್ದಾರೆ.

