ಕಾಸರಗೋಡು: ಕಳೆದ ವರ್ಷ ರಾಜ್ಯವನ್ನು ಕಂಗೆಡಿಸಿದ ನೆರೆ ಹಾವಳಿ ವೇಳೆ ಜಿಲ್ಲೆಯಲ್ಲೂ ಬಿರುಸಿನ ಗಾಳಿಮಳೆಗೆ ಹಾನಿಗೊಂಡಿದ್ದ 42 ಮನೆಗಳ ಪುನರ್ ನಿರ್ಮಾಣ ಪ್ರಗತಿಯಲ್ಲಿದೆ. ಇದರಲ್ಲಿ ಸಹಕಾರಿಇಲಾಖೆಯ ಕೇರ್ ಹೋಂ ಯೋಜನೆ ಪ್ರಕಾರ 7 ಮನೆಗಳನಿರ್ಮಾಣ ಪೂರ್ತಿಗೊಂಡು ಫಲನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಕಾಸರಗೋಡು ತಾಲೂಕಿನಲ್ಲಿಎರಡು, ವೆಳ್ಳರಿಕುಂಡ್ ನಲ್ಲಿ 4, ಮಂಜೇಶ್ವರದಲ್ಲಿ ಒಂದು ಮನೆ ಈ ರೋಈತಿ ನಿರ್ಮಿಸಲಾಗಿದೆ. ತಲಾ 5 ಲಕ್ಷ ರೂ. ವೆಚ್ಚದಲ್ಲಿ ಈ ಮನೆಗಳನಿರ್ಮಾಣನಡೆದಿದೆ. 4 ಲಕ್ಷ ರೂ. ಕೇರ್ ಹೋಂಯೋಜನೆ ಪ್ರಕಾರ, ಒಂದು ಲಕ್ಷರೂ. ಮುಖ್ಯಮಂತ್ರಿ ಅವರ ನೆರೆ ದುರಂತ ನಿವಾರಣೆ ನಿಧಿಯಿಂದ ನೀಡಲಾಗಿತ್ತು.
35 ಮನೆಗಳ ನಿರ್ಮಾಣಕ್ಕೆ 12 ಫಲಾನುಭವಿಗಳಿಗೆ ಅರ್ಹವಾಗಿರುವ ಪೂರ್ಣ ನಿಧಿ ಮಂಜೂರು ಮಾಡಲಾಗಿದೆ. ಜಾಗ,ಮನೆ ಕಳಕೊಂಡಿರುವ 4 ಕುಟುಂಬಗಳಿಗೆ ಜಗ ಪತ್ತೆ ಮಾಡುವ ಕ್ರಮಗಳು ಮುಂದುವರಿಯುತ್ತಿವೆ. ಅಧಾರ್ಂಶ ಹಾನಿಗೊಮಡಿರುವ 792 ಮನೆಗಳಿಗೂ ಅರ್ಹ ಆರ್ಥಿಕ ಸಹಾಯ ಹಸ್ತಾಂತರಿಸಲಾಗಿದೆ. ನಾಶನಷ್ಟ ಅನುಭವಿಸಿರುವ ಮಂದಿಗೆ ರಾಜ್ಯ ದುರಂತ ಪ್ರತಿರೋಧ ನಿಧಿಯಿಂದ 1,46,40,453 ರೂ., ಮುಖ್ಯಂತ್ರಿ ದುರಂತ ನಿವಾರಣೆ ನಿಧಿಯಿಂದ 3,38,84,200 ರೂ.ಮಂಜೂರು ಮಾಡಲಾಗಿದೆ. ಜೊತೆಗೆ ಕೃಷಿ ವಲಯದಲ್ಲಿ ಸಂಭವಿಸಿದ ನಾಶನಷ್ಟಗಳಿಗೆ ಅರ್ಹ ನಿಧಿ ಮಂಜೂರು ಮಾಡಲಾಗಿದೆ.

