ಸಮರಸ ಚಿತ್ರ ಸುದ್ದಿ: ಕುಂಬಳೆ: ಕುಂಬಳೆ ಬದಿಯಡ್ಕ ರಸ್ತೆಯ ನಾರಾಯಣಮಂಗಲ ಭಗವತಿ ನಗರದಲ್ಲಿ ಮಳೆಯ ಅಬ್ಬರಕ್ಕೆ ಮಾರ್ಗದಲ್ಲಿ ಮಳೆ ನೀರು ಸಂಚರಿಸಲು ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೇ ಹರಿದು ವಾಹನ ಸಂಚಾರಕ್ಕೆ ತೊಡಕು ಉಂಟುವiÀ್ಡುತ್ತಿದೆ. ರಸ್ತೆಯಲ್ಲಿ ಕಟ್ಟಿನಿಂತಿರುವ ನೀರು ವಾಹನ ಸಂಚಾರದ ವೇಳೆ ಮೇಲ್ಬದಿಗೆ ಚಿಮ್ಮಿ ವಾಹನಗಳ ಪೂರ್ತಿ ಮೇಲ್ಬಾಗದ ವರೆಗೆ ಚಿಮ್ಮಿ ಪ್ರೀ ಬಾತ್ ನ ಅನುಭವ ನೀಡುತ್ತಿದೆ.
ಲೋಕೋಪಯೋಗಿ ಇಲಾಖೆಯ ಅಜ್ಞಾನ, ತಿಳುವಳಿಕೆಯ ಕೊರತೆಯಿಂದ ಅಸಮರ್ಪಕ ರಸ್ತೆ ನಿರ್ಮಾಣ ಮಳೆ ನೀರು ರಸ್ತೆಯಲ್ಲೇ ನಿಲ್ಲಲು ಕಾರಣವಾಗುತ್ತಿದ್ದು, ಸಂಬಂಧಪಟ್ಟವರು ಇನ್ನಾದರೂ ಬುದ್ದಿ ಉಪಯೋಗಿಸಬೇಕಿದೆ ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸುತ್ತಾರೆ.


