ಬದಿಯಡ್ಕ: ಎಲ್ಲಾ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕು ಇದೆ. ಆದುದರಿಂದ ಸೂಕ್ತ ವಿದ್ಯಾಭ್ಯಾಸ ನೀಡುವಲ್ಲಿ ಹೆತ್ತವರು ಆಸಕ್ತಿ ತೋರಬೇಕು. ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಉಚಿತವಾಗಿ ನೀಡಲಾಗುತ್ತಿದೆ. ಎಲ್ಲರೂ ತಮ್ಮ ಮ್ಕಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ಪೆರಡಾಲ ಕೊರಗ ಕಾಲನಿಯ ಎಂ.ಜಿ.ಎಲ್.ಸಿ. ಏಕೋಪಾಧ್ಯಾಯ ಶಾಲೆಯ ಕೊರಗ ಮಕ್ಕಳಿಗೆ ತನ್ನ ಸ್ವಂತ ಖರ್ಚಿನಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಪ್ರಸ್ತುತ ಈ ಶಾಲೆಯ ಕಟ್ಟಡಕ್ಕೆ 2 ಲಕ್ಷ ರೂ. ಗಳನ್ನು ಗ್ರಾ.ಪಂ. ಮೀಸಲಿರಿಸಿದೆ. ಮುಂದಿನ ಎರಡು ತಿಂಗಳುಗಳಲ್ಲಿ ಕಾಮಗಾರಿಗಳು ಆರಂಭಗೊಳ್ಲಲಿದೆ. ಇಲ್ಲಿನ ವಿದ್ಯುತ್ತಿನ ಕೊರತೆಯನ್ನು ಗ್ರಾಮ ಪಂಚಾಯತು ಈಗಾಗಲೇ ನೀಗಿಸಿದೆ. ಇಲ್ಲಿಯ ಮಕ್ಕಳಿಗೆ ಕಲಿಯುವಿಕೆಗೆ ಬೇಕಾದ ಹಣದ ಕೊರತೆಯಿರಬಾರದು ಎಂಬ ದೃಷ್ಟಿಯಿಂದ 14 ವರ್ಷಗಳಿಂದ ಪುಸ್ತಕ ಉಚಿತವಾಗಿ ತನ್ನ ಸ್ವಂತ ಕೈಯಿಂದ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು. ಬಡವರ ಪಾಲಿಗೆ ವಿದ್ಯೆ ಕೇವಲ ಒಂದು ಕನಸಾಗದೆ ನಾಳೆಯ ಬೆಳಕಾಗಬೇಕು ಎಂಬ ಉದ್ಧೇಶದಿಂದ ಇಂತಹ ಚಟುವಟಿಕೆ ನಡೆಸಲಾಗುವುದೆಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾಮ ಪಂಚಾಯತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಉಪಾಧ್ಯಕ್ಷ ಪೆÇ್ರ.ಎ.ಶ್ರೀನಾಥ್ ಉಪಸ್ಥಿತರಿದ್ದು ಶುಭಹಾರೈಸಿದರು. ಎಂ.ಜಿ.ಎಲ್.ಸಿ.ಯ ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ ಸ್ವಾಗತಿಸಿ, ಪುಷ್ಪಾ ವಂದಿಸಿದರು.


