ಕಾಸರಗೋಡು: ನಗರದಾದ್ಯಂತ ದಾರಿದೀಪ ಉರಿಯದೆ ಆರು ತಿಂಗಳುಗಳು ಕಳೆದವು. ಜನಸಾಮಾನ್ಯರು ದಾರಿಯಲ್ಲಿ ಬೆಳಕಿಲ್ಲದೆ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಇಡೀ ನಗರ ಕತ್ತಲೆಯಿಂದ ಆವೃತವಾಗಿದಂತಿದೆ. ನಿರಂತರವಾಗಿ ಅ„ಕಾರವನ್ನು ಅನುಭವಿಸುತ್ತಿರುವ ಮುಸ್ಲಿಂ ಲೀಗ್ ಆಡಳಿತ ಜನಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜನ ಸೇವೆ ಎಂಬುದು ಅವರ ಅಜೆಂಡಾದಲ್ಲಿ ಇಲ್ಲದಂತೆ ಕಾಣುತ್ತಿದೆ. ನಗರಸಭೆಗೆ ತೆರಿಗೆಯನ್ನು ಕಟ್ಟುವ ನಗರವಾಸಿಗಳಿಗೆ ಬೇಕಾದ ಸೌಕರ್ಯವನ್ನು ಮಾಡಲು ನಗರಸಭೆ ಅ„ಕಾರಿಗಳಿಗೆ ಇಚ್ಛಾಶಕ್ತಿಯ ತುಂಬ ಕೊರತೆ ಇದೆ. ನಗರಸಭೆಯ ಈ ರೀತಿಯ ಕಾರ್ಯ ಶೈಲಿಯನ್ನು ಬಿಜೆಪಿ ಎಂದೂ ಸಹಿಸುವುದಿಲ್ಲ. ದಾರಿದೀಪ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಸಾಂಕೇತಿಕವಾಗಿ ಬೂತ್ ಮಟ್ಟದಲ್ಲಿ ದೊಂದಿ ಉರಿಸಿ ಪ್ರತಿಭಟನೆಯನ್ನು ಈಗಾಗಲೇ ಮಾಡಲಾಗಿದೆ. ಬಿಜೆಪಿಯ ಈ ಪ್ರತಿಭಟನೆಯನ್ನು ನಿರ್ಲಕ್ಷಿಸಿ ಕೆಟ್ಟುಹೋದ ದಾರಿದೀಪವನ್ನು ಸರಿಪಡಿಸಲು ಸರಿಯಾದ ಹೆಜ್ಜೆಯನ್ನು ಸ್ವೀಕರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸಲಾಗುವುದು ಎಂದು ನಗರಸಭೆಯ ಸದಸ್ಯ ಅರುಣ್ ಕುಮಾರ್ ಶೆಟ್ಟಿ ಎಚ್ಚರಿಸಿದ್ದಾರೆ.
ಉರಿಯದ ವಿದ್ಯುತ್ ದೀಪ : ಬಿಜೆಪಿ ಹೋರಾಟದತ್ತ
0
ಜುಲೈ 09, 2019