ಕಾಸರಗೋಡು: ನಿರ್ಮಾಣ ಅರ್ಧದಲ್ಲೇ ಉಳಿದುಕೊಂಡಿರುವ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಮನೆ ಪೂರ್ತಿಗೊಳಿಸುವ ನಿಟ್ಟಿನಲ್ಲಿ ವಿಶೇಷ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಅರ್ಜಿ ಕೋರಲಾಗಿದೆ.
ಕಳೆದ ಹತ್ತು ವರ್ಷದ ಅವಧಿಯಲ್ಲಿ ವಿವಿಧ ಇಲಾಖೆಗಳಿಂದ ಆರ್ಥಿಕ ಸಹಾಯ ಪಡೆದರೂ ಮನೆ ನಿರ್ಮಾಣಪೂರ್ತಿಗೊಳಿಸದೇ ಇರುವವರು, ನಿಗದಿತ ರೂಪದಲ್ಲಿ ಮೇಲ್ಛಾವಣಿ ನಿಒರ್ಮಾಣ ನಡೆಸಿದೇ ಇರುವ ಕಾರಣ ಕೊನಯ ಕಂತು ಲಭಿಸದೇ ಇರುವವರು, ಸ್ವಂತ ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ಹೊರಟು ಕಾಮಗಾರಿ ಪೂರ್ಣಗೊಳ್ಳದೇ ಇರುವವರು ಆಗಿರುವ ಪರಿಶಿಷ್ಟ ಜಾತಿಯ ಮಂದಿಗೆ ಎಸ್ಟಿಮೇಟ್ ಆಧಾರದಲ್ಲಿ ಒಂದೂವರೆ ಲಕ್ಷ ರೂ. ನೀಡಲಾಗುವುದು. ಕೌಟುಂಬಿಕ ವಾರ್ಷಿಕ ಆದಾಯ ಒಂದೂವರೆ ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಇರುವವರು ಅರ್ಜಿ ಸಲ್ಲಿಸಬಹುದು.
ನಿಗದಿತ ಮಾದರಿಯಲ್ಲಿರುವ ಅರ್ಜಿಯ ಜೊತೆಗೆ ಅರ್ಜಿದಾರ/ಅರ್ಜಿದಾರೆ ಜಾತಿ,ಆದಾಯ, ಜಾಗದ ಅಥವಾ ಮನೆಯ ಮಾಲೀಕತ್ವದ ದಾಖಲಾತಿ ಪತ್ರ ಹಾಜರುಪಡಿಸಬೇಕು. ಇಲಾಖೆ/ ಏಜೆನ್ಸಿಗಳಿಂದ ಆರ್ಥಿಕ ಸಹಾಯ ಪೂರ್ಣ ರೂಪದಲ್ಲಿ ಪಡೆದವರು ಕೊನೆಯ ಕಂತು ಪಡೆದ ರಶೀದಿ ಇಲಾಖೆ/ಏಜೆನ್ಸಿಗಳಿಂದ ಸಾಕ್ಷ್ಯಪತ್ರ ಪಡೆದು ಸಲ್ಲಿಸಬೇಕು. ಮೇಲ್ಛಾವಣಿ ನಿರ್ಮಾಣ ನಡೆಸದೇ ಇರುವ ಹಿನ್ನೆಲೆಯಲ್ಲಿ ಕೊನೆಯ ಕಂತು ಪಡೆಯದೇ ಇರುವವರು ಇಲಾಖೆ/ ಏಜೆನ್ಸಿಯಿಂದ ಸಾಕ್ಷ್ಯಪತ್ರ ಪಡೆದು ಸಲ್ಲಿಸಬೇಕು. ಸ್ವಂತ ನೆಲೆಯಲ್ಲಿ ಮನೆನಿರ್ಮಾಣಕ್ಕೆ ಹೊರಟು ಪೂರ್ಣಗೊಳಿಸದೇ ಇರುವವರು ಸ್ಥಳೀಯಾಡಳಿತ ಸಂಸ್ಥೆಯ ಕಾರ್ಯದರ್ಶಿ/ ಇಂಜಿನಿಯರ್ ನೀಡುವ ಸಾಕ್ಷ್ಯಪತ್ರ ಹಾಜರುಪಡಿಸಬೇಕು. ಮನೆ ಪೂರ್ಥೀಕರಣ ಸಂಬಂಧ ಸ್ಥಳೀಯಾಡಳಿತ ಸಂಸ್ಥೆ ಇಂಜಿನಿಯರ್/ ಓವರ್ ಸೀಯರ್ ಯಾ ಅಂಗೀಕೃತ ಕಟ್ಟಡ ಸೂಪರ್ ವೈಸರ್ ಸಿದ್ಧಪಡಿಸಿದ ಸಮಗ್ರ ಎಸ್ಟಿಮೇಟ್ ಅರ್ಜಿಯೊಂದಿಗೆ ಇರಬೇಕು. ನಡೆಸಲು ಉದ್ದೇಶಿಸಿರುವ ಕಾಮಗಾರಿಗಳ ಆಯಾ ವಿಭಾಗಕ್ಕೆ ತಗಲುವ ವೆಚ್ಚದ ಸ್ಪಷ್ಟ ಮಾಹಿತಿ ಎಸ್ಟಿಮೇಟ್ ನಲ್ಲಿರಬೇಕು. ಲೈಫ್ ಮಿಷನ್ ಯೋಜನೆ ಪ್ರಕಾರ ಆರ್ಥಿಕ ಸಹಾಯ ಪಡೆದವರು ಈ ಸೌಲಭ್ಯಕ್ಕೆ ಅರ್ಹರಲ್ಲ. ಸಂಬಂಧಪಟ್ಟ ಬ್ಲೋಕ್, ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗಳಲ್ಲಿ ಜು.30ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಿದ್ದು, ಮಾಹಿತಿ ಮತ್ತು ಅರ್ಜಿ ಫಾರಂ ಮಾದರಿಗಾಗಿ ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಬಹುದು.


