ಕಾಸರಗೋಡು: ಪೆರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಹಲಸು ಮಹೋತ್ಸವ ವೈವಿಧ್ಯತೆಯಿಂದ ಗಮನ ಸೆಳೆದಿದೆ.
ಹಲಸಿನ ಹಣ್ಣಿನ ವಿಶೇಷತೆಗಳನ್ನು ತಿಳಿಸುವ ಅನೇಕ ಆರೋಗ್ಯಯುತ ಖಾದ್ಯಗಳನ್ನು ಪ್ರದರ್ಶಿಸುವ ಮೂಲಕ, ಹಲಸಿನಿಂದ ತಯಾರಿಸಬಹುದಾದ ವೈವಿಧ್ಯಗಳ ಕುರಿತು ಮಾಹಿತಿ ನೀಡುವ ಕಿರು ಹೊತ್ತಗೆಗಳನ್ನು ವಿತರಿಸುವ ಮೂಲಕ ಶಾಲೆಯ ಮಕ್ಕಳ ಗಮನವನ್ನು ಈ ಸಮಾರಂಭ ಆಕರ್ಷಣೀಯವಾಯಿತು.
ಹಲಸಿನ ಸೊಳೆಯಿಂದ ತಯಾರಿಸಬಹುದಾದ ಪರಂಪರಾಗತ ಖಾದ್ಯಗಳಾದ ಕಜ್ಜಾಯ, ಕಾಯಿಕಡುಬು, ಕಲ್ತಪ್ಪ, ಚಿಪ್ಸ್, ಪಾಯಸ, ದೋಸೆ, ಪುಟ್, ಚಪಾತಿ ಸಹಿತ ನೂರಾರು ತಿನಿಸುಗಳು ವಿದ್ಯಾರ್ಥಿಗಳಿಗೆ ಕುತೂಹಲ ಮುಡಿಸಿದುವು.
ಶಿಕ್ಷಕ, ಕವಿ ಪ್ರಕಾಶನ್ ಮಡಿಕೈ ಹಲಸಿನ ಗುಣ ತಿಳಿಸುವ ಕವನಗಳನ್ನು ಆಲಾಪಿಸಿದರು. ಮುಖ್ಯಶಿಕ್ಷಕ ವಿ.ಎಂ.ಸತ್ಯನ್ ಸಮಾರಂಭ ಉದ್ಘಾಟಿಸಿದರು. ಲಾನ್ಸಿ ಟೀಚರ್, ದೀಪಾ ಪಿ., ದೀಪಾ ಕೆ. ಮೊದಲಾದವರು ಉಪಸ್ಥಿತರಿದ್ದರು. ಸುನಿತಾ ಡಾನಿಯಲ್ ಸ್ವಾಗತಿಸಿದರು. ಒ.ಪಿ.ಷೀಬಾ ವಂದಿಸಿದರು.


