ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಇಲಾಖೆ ಭೇಟಿ, ಸ್ವೋದ್ಯೋಗದ ಬಗ್ಗೆ ಅಧ್ಯಯನ ಪ್ರವಾಸ ನಡೆಯಿತು.
ಕಾಸರಗೋಡು ಪೆÇಲೀಸ್ ಠಾಣೆಗೆ ಭೇಟಿ ನೀಡಲಾಯಿತು. ಕಾನೂನಿನ ಬಗ್ಗೆ ಕಾಸರಗೋಡು ಪೆÇಲೀಸ್ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಬ್ ಇನ್ಸ್‍ಪೆಕ್ಟರ್ ಭವಿಶ್, ಹೆಚ್ಚುವರಿ ಸಬ್ ಇನ್ಸ್‍ಪೆಕ್ಟರ್ ವೇಣುಗೋಪಾಲ ಟಿ.ಕೆ, ಸಿವಿಲ್ ಪೆÇಲೀಸ್ ರಾಜೇಂದ್ರನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಂಗೀತ, ಸೇವಾ ಪ್ರತಿನಿಧಿ ಕುಶಾಲಾಕ್ಷಿ, ಭಾಸ್ಕರ, ಸತ್ಯನಾರಾಯಣ ಮತ್ತು ಜ್ಯೋತಿ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.


