ಕಾಸರಗೋಡು: ಸಮಾಜದ ಉನ್ನತಿಗಾಗಿ ಸಮಾಜದ ಎಲ್ಲರೂ ದುಡಿಯಬೇಕು ಮತ್ತು ಮಕ್ಕಳಲ್ಲಿ ಉತ್ತಮ ಶಿಸ್ತು, ಗುಣ ನಡತೆಯನ್ನು ಮೂಡಿಸಬೇಕೆಂದು ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರ ಅವರು ಹೇಳಿದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸಂಘ ಕೂಡ್ಲು ಇದರ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷೋತ್ತಮ ಕೂಡ್ಲು ಅವರ ಮನೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸತೀಶ ಬಿ. ಅವರು ವಹಿಸಿದ್ದರು. ಸಂಘದ ಈ ವರ್ಷದ ಕಾರ್ಯಕ್ರಮಗಳ ವಿವರಣೆಯನ್ನು ಕಾರ್ಯದರ್ಶಿ ಜಗದೀಶ್ ಕೂಡ್ಲು ಅವರು ತಿಳಿಸಿದರು. ಸೆ.8 ರಂದು ಸಮಾಜ ಬಾಂಧವರು ಶೃಂಗೇರಿ ಯಾತ್ರೆಯಲ್ಲಿ ಭಾಗವಹಿಸುವಂತೆಯೂ ನವಂಬರ ತಿಂಗಳಲ್ಲಿ ಸಂಘದ ನೇತೃತ್ವದಲ್ಲಿ ತಲಕಾವೇರಿ, ಮಡಿಕೇರಿಗಳಲ್ಲಿರುವ ಧಾರ್ಮಿಕ ಹಾಗು ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲು ತೀರ್ಮಾನಿಸಲಾಯಿತು. ಈ ಕುರಿತು ವಿವರಣೆಯನ್ನು ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಸತೀಶ್ ಕೂಡ್ಲು ಅವರು ನೀಡಿದರು. ಮಾಸ್ತರ್ ಡಿಗ್ರಿಯಲ್ಲಿ ಕಲಿಯುತ್ತಿರುವ ಕೂಡ್ಲು ಉಪಸಂಘದ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಆಗೋಸ್ತು ತಿಂಗಳ 25 ನೇ ತಾರೀಕಿನಂದು ನೀಡಲು ತೀರ್ಮಾನಿಸಲಾಯಿತು.
ಈ ಕುರಿತು ಚರ್ಚೆಯಲ್ಲಿ ನಿವೃತ್ತ ಪೆÇಲೀಸ್ ಅಧಿಕಾರಿ ಪುರುಷೋತ್ತಮ, ಶೋಭ, ಪ್ರಫುಲ್ಲ, ಪುಷ್ಪಲತಾ, ಸತೀಶ್ ಕೆ. ಮುಂತಾದವರು ಭಾಗವಹಿಸಿದರು. ಲಕ್ಷ್ಮೀಕಾಂತ, ಸ್ವರ್ಣಲತಾ, ಶಾರದ, ಗೀತಾ, ಪದ್ಮಿನಿ, ಸುಗಂಧಿ, ಶಾಂಭವಿ, ಜಯ ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ವೆಂಕಟೇಶ ಸ್ವಾಗತಿಸಿದರು. ರಾಜೇಂದ್ರ ವಂದಿಸಿದರು.

