ಕುಂಬಳೆ: ವಿಷ್ಣುವಳ್ಳಿ ಬೇರ್ಯತ್ತಬೀಡು ಕುಟುಂಬಸ್ಥರ ಮೂಲ ತರವಾಡಿನ ಪುನರ್ ನಿರ್ಮಾಣ ಕುರಿತು ವಿವಿಧ ಸಮಿತಿಗಳ ವಿಶೇಷ ಸಭೆ ಜು.21 ರಂದು ಬೆಳಗ್ಗೆ 10 ಗಂಟೆಗೆ ಸಮಿತಿಯ ಗೌರವ ಅಧ್ಯಕ್ಷ ಮಹಾಲಿಂಗ ಮುಖಾರಿ (ಬಬ್ಬರ್ಯ ಬೆಳ್ಚಪ್ಪಾಡ) ಅವರ ನಿವಾಸದಲ್ಲಿ ಜರಗಲಿದೆ.
ತರವಾಡಿನ ನಿರ್ಮಾಣ ಸಮಿತಿ, ನವೀಕರಣ ಸಮಿತಿ, ಮಾತೃ ಸಮಿತಿ ಹಾಗು ಯುವ ಸಮಿತಿಗಳ ಜಂಟಿ ಸಭೆಯಲ್ಲಿ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

