ಮುಳ್ಳೇರಿಯ: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಆ.17ರಂದು ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರ ಪರಿಸರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 6ಕ್ಕೆ ಗಣಪತಿಹೋಮ, 7ಕ್ಕೆ ದೇವತಾ ಪ್ರಾರ್ಥನೆ, ಪಾದುಕಾ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ಪಾದ ಪೂಜೆ , ತುಳಸಿ ಅರ್ಚನೆ, 8ಕ್ಕೆ ಮಹಾಪೂಜೆ , 8.30ರಿಂದ ಕುಂಟಾರು ಶ್ರೀ ಸಂಗೀತ ಕಲಾ ಶಾಲಾ ಮಕ್ಕಳಿಂದ ಸಂಗೀತಾರಾಧನೆ, 9.30ರಿಂದ ಹರಿಪ್ರಿಯ ಮಹಿಳಾ ಭಜನಾ ಸಂಘದವರಿಂದ ಭಜನೆ, 10.30ರಿಂದ ಚಂದ್ರಕಲಾಮೂರ್ತಿ ಮತ್ತು ಬಳಗದವರಿಂದ ಭಕ್ತಿಗಾನಮೇಳ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, 2ರಿಂದ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಾಯಂಕಾಲ 5.30ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಯಕ್ಷಗಾನ ಬಯಲಾಟ, ರಾತ್ರಿ 9.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.


