ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯದ ಸೀತಮ್ಮ ಎಂಬವರ ಲಕ್ಷ್ಮಿ ವೆಂಕಟೇಶ್ವರ ನಿವಾಸದಲ್ಲಿ ವರಮಹಾಲಕ್ಷ್ಮಿ ಪೂಜೆ ಮತ್ತು ಗಣಪತಿ ಹೋಮ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಸಾಮೂಹಿಕವಾಗಿ ಶುಕ್ರವಾರ ನಡೆಯಿತು. ಕಳೆದ ಹತ್ತು ವರ್ಷಗಳಿಂದ ಸಾಮೂಹಿಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಪೂಜಾದಿ ಕಾರ್ಯಕ್ರಮದಲ್ಲಿ ಸುಮಾರು ನೂರರಷ್ಟು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅನ್ನದಾನದಲ್ಲಿ ಪಾಲ್ಗೊಂಡರು. ಮಹಿಳೆಯರಿಗೆ ರವಿಕೆ, ತೆಂಗಿನಕಾಯಿ, ಅರಸಿನ ಹುಡಿ, ಒಂದು ರೂ. ನಾಣ್ಯ, ಬಳೆ, ಮಲ್ಲಿಗೆ, ಶಾಲು ಮತ್ತು ಸಿಹಿ ಎಲೆಯಡಿಕೆ ಮುಂತಾದವನ್ನು ಕೊಟ್ಟು ಆಚರಿಸಲಾಗುತ್ತದೆ.
ಅಭಿಮತ:
ಶ್ರೀ ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಸ್ಥಿತಿಕಾರಕ ಮಹಾವಿಷ್ಣುವಿನ ಪತ್ನಿಯಾದ ಈಕೆಯ ಕೃಪಾ ಕಟಾಕ್ಷವಿಲ್ಲದೆ ಲೌಕಿಕ ಬದುಕು ಸಾಗದು. ಅಷ್ಟೇ ಅಲ್ಲ, ಅಧ್ಯಾತ್ಮಿಕ ಬದುಕಿಗೆ ಪೂರಕವಾಗಿಯೂ ಈಕೆಯ ಕಾರುಣ್ಯ ಅಗತ್ಯ. ಏಕೆಂದರೆ ಭಾರತೀಯ ಚಿಂತನೆಯ ಪ್ರಕಾರ ಸಂಪತ್ತು ಎಂದರೆ ಕೇವಲ ಹಣವಲ್ಲ. ಧನ ಸಂಪತ್ತಿನ ಹಾಗೆಯೇ ಧಾನ್ಯ ಸಂಪತ್ತು, ಜ್ಞಾನ ಸಂಪತ್ತು, ಸಂತಾನಾದಿ ಅಷ್ಟ ಸಂಪತ್ತುಗಳು ಸಾರ್ಥಕ ಬದುಕಿಗೆ ಅಗತ್ಯವೆಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮನೆಯಲ್ಲಿ ವಷರ್ಂಪ್ರತಿ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುತ್ತಾ ಬರುತ್ತಿದ್ದೇವೆ.
ಲಕ್ಷ್ಮೀ ಶೆಟ್ಟಿ ಮಾನ್ಯ.
ಪೂಜೆ ನಿರ್ವಹಿಸಲ್ಪಟ್ಟ ಮನೆಯ ಗೃಹಿಣಿ.


