ಚೆನ್ನೈ/ ತಿರುವನಂತಪುರಂ/ ಬೆಂಗಳೂರು: ದಕ್ಷಿಣ ಭಾರತದಲ್ಲಿ ಜಲಪ್ರವಾಹ ಉಂಟಾಗಿದ್ದು ಕನಿಷ್ಟ 20 ಜನ ಸಾವನ್ನಪ್ಪಿದ್ದಾರೆ.
ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಒಟ್ಟಾರೆ 23 ಜನರು ಸಾವನ್ನಪ್ಪಿದ್ದಾರೆ.
ಕೇರಳದ ಮೆಪ್ಪಾಡಿಯಲ್ಲಿ ಮಣ್ಣು ಕುಸಿತ ಸಂಭವಿಸಿದ್ದು, ದೇವಾಲಯ, ಚರ್ಚ್, ಮನೆಗಳು ಕುಸಿದಿವೆ. ಕೊಟ್ಟಾಯಂ, ಅಲಪ್ಪುಳ ಜಿಲ್ಲೆಗಳಲ್ಲಿ ಪ್ರವಾಹದ ಸಾಧ್ಯತೆ ಹೆಚ್ಚಾಗಿದ್ದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಧಾರಾಕಾರ ಮಳೆಯಿಂದಾಗಿ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನ ಸೇವೆಗಳನ್ನು ಬೆಳಿಗ್ಗೆ 9 ಗಂಟೆ ವರೆಗೆ ಸ್ಥಗಿತಗೊಳಿಸಲಾಗಿದೆ.


