ವಯನಾಡು: ದೇವಾಲಯ, ಮಸೀದಿ, ಅಂಚೆ ಕಚೇರಿ ಮತ್ತು ಪ್ಲಾಂಟೇಶನ್ ಕಂಪನಿಯ ಕ್ಯಾಂಟೀನ್‍ನೊಂದಿಗೆ ಸುಮಾರು 100 ಎಕರೆ ಚಹಾ ಎಸ್ಟೇಟ್ ಜಮೀನು- ಹೀಗೆ ನ್ನಾ ಜನವಸತಿ ಪ್ರದೇಶಗಳನ್ನು ಒಳಗೊಂಡಿದ್ದ ಕೇರಳದ ಪುದುಮಲೈ ಗ್ರಾಮವು ಗುರುವಾರ ನೀರಿನಲ್ಲಿ ಸಂಪೂರ್ಣ ಜಲಸಮಾಧಿಯಾಗಿದೆ. ಸುಂದರ ವೈನಾಡಿನ ಬೆಟ್ಟ ಪ್ರದೇಶದ ಪಟ್ಟಣ ಮೆಪ್ಪಾಡಿಯಿಂದ 11 ಕಿ.ಮೀ ದೂರದಲ್ಲಿದ್ದ ಈ ಗ್ರಾಮ ಕೇರಳದಲ್ಲಿ ವರುಣನ ರುದ್ರ ನರ್ತನಕ್ಕೆ ಆಹುತಿಯಾಗಿದೆ.
ಭೂಕುಸಿತದಿಂದ ಬದುಕುಳಿದ ಗ್ರಾಮಸ್ಥರೊಬ್ಬರು ಹೇಳಿದಂತೆ "ಪುದುಮಲೈಗ್ರಾಮ ಇನ್ನು ನೆನಪು ಮಾತ್ರ!" ಶುಕ್ರವಾರ ಇಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ ವೇಳೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ ಇನ್ನೂ 15-20 ಜನ ಕೆಸರಿನಡಿ ಸಿಕ್ಕಿಕೊಂಡಿದ್ದಾರೆಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹ್ಯಾರಿಸನ್ಸ್ ಮಲಯಾಳಂ ಒಡೆತನದ 100 ಎಕರೆ ಚಹಾ ಎಸ್ಟೇಟ್ ಇಲ್ಲಿತ್ತು. ನೂರಾರು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು.


