ಮಂಜೇಶ್ವರ : ಶಾಂತಿ ಸೇನಾ ಫೌಂಡೇಶನ್, ಗಾಂಧೀ ಸ್ಮ್ಮತಿ ಮತ್ತು ದರ್ಶನ ಸಮಿತಿ, ಹರಿಜನ ಸೇವಕ ಸಂಘ ಸಹಿತ ಹಲವು ಗಾಂಧೀ ಸಂಘಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 23 ಹಾಗೂ 24ರಂದು ಮಂಜೇಶ್ವರ ಕಲಾಸ್ಪಶರ್ಂ ಆಡಿಟೋರಿಯಂನಲ್ಲಿ ಎರಡು ದಿನಗಳ ರಾಷ್ಟ್ರೀಯ ಶಾಂತಿ ಸೇನಾ ದಿನಾಚರಣೆ ಹಾಗೂ ವಿಚಾರ ಸಂಕಿರಣ ಜರುಗಲಿದೆ.
ಆಗಸ್ಟ್ 23ರಂದು ಬೆಳಿಗ್ಗೆ 9 ಗಂಟೆಗೆ ಕೇಂದ್ರ ಸಾಂಸ್ಕೃತಿಕ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಉದ್ಘಾಟಿಸಲಿದ್ದು, ಗಾಂಧೀ ಪೀಸ್ ಮಿಶನ್ ಅಧ್ಯಕ್ಷ ಡಾ.ಎನ್.ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಜಿ.ಪಂ ಅಧ್ಯಕ್ಷ ಎಜಿಸಿ ಬಶೀರ್, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತಾ ದಿವಾಕರ್, ಮೀರತ್ ಶೋಬಿತ್ ವಿಶ್ವವಿದ್ಯಾಲಯ ಕುಲಪತಿ ಕುನ್ವರ್ ಶೇಖರ್ ವಿಜೇಂದ್ರ, ಭೋಪಾಲ್ ಜಾಗರಣ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅನೂಪ್ ಸ್ವರೂಪ್, ಹರಿಜನ್ ಸೇವಕ ಸಂಘದ ಅಧ್ಯಕ್ಷ ಪ್ರೊ. ಶಂಕರ್ ಕುಮಾರ್ ಸಾನ್ಯಲ್ ಸಹಿತ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ವಿವಿಧ ವಿಚಾರಗೋಷ್ಟಿ, ಚರ್ಚಾಗೋಷ್ಠಿಗಳು ನಡೆಯಲಿದ್ದು ದೇಶದಾದ್ಯಂತದಿಂದ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಯುವಜನರು ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್ 24ರಂದು ಶನಿವಾರ ಬೆಳಿಗ್ಗೆ ಜರುಗುವ ಸಮಾರೋಪ ಸಮಾರಂಭವನ್ನು ಕೇರಳ ರಾಜ್ಯ ಸಾಂಸ್ಕೃತಿಕ ಖಾತೆ ಸಚಿವ ಎ.ಕೆ.ಬಾಲನ್ ಉದ್ಘಾಟಿಸಲಿದ್ದು, ನವದೆಹಲಿ ಗಾಂಧೀ ಸ್ಮೃತಿ ದರ್ಶನ್ ಸಮಿತಿ ಅಧ್ಯಕ್ಷ ದಿಪಾಂಕರ್ ಶ್ರೀಗ್ಯಾನ್ ಅಧ್ಯಕ್ಷತೆ ವಹಿಸುವರು. ಮಂಗಳೂರು ಶಾಸಕ ಯು.ಟಿ.ಖಾದರ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಬ್ಲಾಕ್.ಪಂ.ಅಧ್ಯಕ್ಷ ಎಕೆಎಂ ಅಶ್ರಫ್,ಜಿ.ಪಂಸ್ಥಾಯೀ ಸಮಿತಿ ಅಧ್ಯಕ್ಷೆ ಫರಿದಾ ಝಕೀರ್, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷ ಅಝೀಝ್ ಹಾಜಿ, ಸದಸ್ಯೆ ಸುಪ್ರಿಯಾ ಪೈ ಮುಂತಾದವರು ಭಾಗವಹಿಸಲಿದ್ದಾರೆಂದು ಸಂಘಟಕ ಹರ್ಷಾದ್ ವರ್ಕಾಡಿ ತಿಳಿಸಿದ್ದಾರೆ.


