ಕಾಸರಗೋಡು: ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ವಿಶ್ವ ಜಾನಪದ ದಿನಾಚರಣೆ=2019 ಕಾರ್ಯಕ್ರಮವು ಇಂದು (ಆ.22) ಬೆಳಿಗ್ಗೆ 9 ರಿಂದ ಬೇಡಗಂನ ಜಯಪುರ ಸಮುದಾಯ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಮಾರಂಭವನ್ನು ಬೇಡಗಂ ಗ್ರಾ.ಪಂ. ಅಧ್ಯಕ್ಷ ಸಿ.ರಾಮಚಂದ್ರನ್ ಉದ್ಘಾಟಿಸುವರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸುವರು. ನಿವೃತ್ತ ಬ್ಯಾಂಕ್ ಅಧಿಕಾರಿ, ಯಕ್ಷದ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ವಿಶೇಷ ಉಪನ್ಯಾಸ ನೀಡುವರು. ಸದಸ್ಯ ಸಂಚಾಲಕಿ ಸರಿತಾ ಶಿವನ್ ಮಲ್ಲ ಸಮನ್ವಯಕಾರರಾಗಿ ಸಹಕರಿಸುವರು. ಪರಿಷತ್ತಿನ ಗೌರವ ಸಲಹೆಗಾರ ಪ್ರೊ.ಎ.ಶ್ರೀನಾಥ್, ರವಿ ನಾಯ್ಕಾಪು, ಝಡ್.ಎ.ಕಯ್ಯಾರ್, ಅಖಿಲೇಶ್ ನಗುಮುಗಂ ಮೊದಲಾದವರು ಉಪಸ್ಥಿತರಿರುವರು.


