ಕಾಸರಗೋಡು: ವಿದ್ಯಾನಗರದ ಚಿನ್ಮಯ ಕಾಲನಿಯಲ್ಲಿರುವ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಆಶ್ರಯದಲ್ಲಿ ಆ.25 ರಂದು ಸಂಜೆ 4 ಗಂಟೆಗೆ ಕಾಸರಗೋಡು ಮುನ್ಸಿಪಲ್ ಕಾನರೆನ್ಸ್ ಹಾಲ್‍ನಲ್ಲಿ ಶ್ರಾವಣ ಸಂಧ್ಯಾ ಸಂಗೀತ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಉದ್ಘಾಟಿಸುವರು.
4.30 ರಿಂದ ಪಾಲ್ಘಾಟ್‍ನ ಚೆಂಬೈ ಮೆಮೋರಿಯಲ್ ಸರ್ಕಾರಿ ಮ್ಯೂಸಿಕ್ ಕಾಲೇಜಿನ ಪ್ರಾಧ್ಯಾಪಕ ವಿವೇಕ್ ಮೂಝಿಕುಲಂ ಅವರಿಂದ ಸಂಗೀತ ಕಚೇರಿ ನಡೆಯಲಿದೆ.
ಪಾಲ್ಘಾಟ್ ಆರ್.ಸ್ವಾಮೀನಾಥನ್ ವಯಲಿನ್‍ನಲ್ಲಿ, ಚೇರ್ತಲ ಎಸ್.ದಿನೇಶ್ ಮೃದಂಗದಲ್ಲಿ, ವೆಳ್ಳಿಕೋತ್ ಪಿ.ರಾಜೀವ್‍ಗೋಪಾಲ್ ಮೋರ್ಸಿಂಗ್‍ನಲ್ಲಿ ಸಹಕರಿಸುವರು.


