ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ವತಿಯಿಂದ ಕಾಸರಗೋಡಿನ ಸಾಹಿತಿ, ಸಂಶೋಧಕ, ಅಧ್ಯಾಪಕ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಜನ್ಮದಿನಾಚರಣೆ ಹಾಗೂ `ಚಿಂತನ ಮಂಥನ' ಕಾರ್ಯಕ್ರಮವು ಇಂದು(ಆಗಸ್ಟ್ 22) ಸಂಜೆ 4ಗಂಟೆಗೆ ಬದಿಯಡ್ಕದ ರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದಿ.ಪಿ.ಕೆ.ಶ್ರೀಕೃಷ್ಣ ಭಟ್ ಅವರ ಸಂಶೋಧನಾ ಕೃತಿ `ಕಾಸರಗೋಡಿನ ಕನ್ನಡಿಗರ ಜನಪದ ನಂಬಿಕೆಗಳು' ಕುರಿತಂತೆ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಚಿಂತನ ಮಂಥನ ನಡೆಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ ಅವರು ಶುಭಾಶಂಸನೆಗೈಯ್ಯುವರು. ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಕವಿತಾ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ.
ಕಾರ್ಯಕ್ರಮದಂಗವಾಗಿ ಕವಿ ಸಮಯ ವಿಶೇಷ ಆಕರ್ಷಣೆಯಾಗಿರಲಿದೆ. ಬಹುಮಾನಿತ ಕವನಗಳ ವಾಚನ ಹಾಗೂ ಗಾಯನ ನಡೆಯಲಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸುಗಮ ಸಂಗೀತ ಶಿಕ್ಷಕಿ ಡಾ.ಸ್ನೇಹ ಪ್ರಕಾಶ್ ಕವನಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಅವುಗಳ ಗಾಯನ ನಡೆಯುತ್ತವೆ.

