ಬದಿಯಡ್ಕ: ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜಾರಿಗೊಳಿಸಲಾಗುವ ಗಡಿಯಾಚೆಗೂ(ಕೇರಳ ಮತ್ತು ಗೋವಾಗಳಲ್ಲಿ) ಸಾಧನೆ ನಡೆಸುತ್ತಿರುವ ಪ್ರತಿಭಾನ್ವಿತ ಕನ್ನಡ ವಿದ್ಯಾರ್ಥಿಗಳಿಗೆ ಪುರಸ್ಕಾರ 2019-20 ಯೋಜನೆಯ ಕಾರ್ಯಕ್ರಮ ಆ.25ರಂದು ಎಡನೀರು ಮಠದಲ್ಲಿ ಜರಗಲಿದೆ.
ಬೆಳಿಗ್ಗೆ 11 ಕ್ಕೆ ಮಠದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಆರ್.ಜನ್ನು ಸಮಾರಂಭವನ್ನು ಉದ್ಘಾಟಿಸುವರು. ಮಂಗಳೂರು ವಿ.ವಿ.ಕುಲಪತಿ ಡಾ.ಪಿ.ಎಸ್.ಎಡಪಡಿತ್ತಾಯ ಪುರಸ್ಕಾರ ಪ್ರದಾನ ಮಾಡುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ವಿಶೇಷ ಆಹ್ವಾನಿತರಾಗಿರುವರು.
ಉದುಮ ಶಾಸಕ ಕುಂಞÂರಾಮನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಜಿಲ್ಲಾ ಪಂಚಾಯತಿ ಸದಸ್ಯ ಕೆ.ಶ್ರೀಕಾಂತ್, ಚೆಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಷಾಹಿನಾ ಸಲೀಂ, ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸುಜಾತಾ ಎಸ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಕ್ಷ ರವೀಂದ್ರನಾಥ್ ಕೆ.ಆರ್., ಎಡನೀರು ಮಠದ ವ್ಯವಸ್ಥಾಪಕ ನ್ಯಾಯವಾದಿ. ಐ.ವಿ.ಭಟ್, ಗೋವಾ ಶಾರದಾ ಮಂದಿರ ಪ್ರೌಢಶಾಲೆ ಅಧ್ಯಕ್ಷ ವೈ.ಆರ್.ಬೆಳಗಲ್ ಮೊದಲಾದವರು ಉಪಸ್ಥಿತರಿರುವರು.

