HEALTH TIPS

ಪೆÇಲೀಸ್ ಸಿಬ್ಬಂದಿ ಹೆಚ್ಚಳ ಬೇಡಿಕೆಯನ್ನು ಗಂಭೀರವಾಗಿ ಪರಿಶೀಲಿಸಲಾಗುವುದು : ಡಿ.ಜಿ.ಪಿ.


      ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಪೆÇಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಸಬ್ ಡಿವಿಝನ್‍ನ ಸಂಖ್ಯೆಯನ್ನು ಮೂರಕ್ಕೇರಿಸಬೇಕು ಎಂಬ ಬೇಡಿಕೆಯನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ರಾಜ್ಯ ಡಿ.ಜಿ.ಪಿ. ಲೋಕ್‍ನಾಥ್ ಬೆಹ್ರಾ ಅವರು ತಿಳಿಸಿದರು.
            ಕಾಸರಗೋಡು ಜಿಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
   2010, 2025, 2030 ವರೆಗೆ ಜಿಲ್ಲೆಯಲ್ಲಿ ಅಗತ್ಯವಿರುವ ಪೆÇಲೀಸ್ ಸಿಬ್ಬಂದಿಯ ಪ್ರಮಾಣದ ರೂಪುರೇಷೆ ಸಿದ್ಧಗೊಳಿಸಲು ಡಿ.ಐ.ಜಿಯ ನೇತೃತ್ವದಲ್ಲಿ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ ಎಂದವರು ತಿಳಿಸಿದರು. ಉಪ್ಪಳ ಪೆÇಲೀಸ್ ಠಾಣೆ ಮುಂದಿನ ಆರ್ಥಿಕ ವರ್ಷದಲ್ಲಿ ಸಾಕಾರಗೊಳ್ಳಲಿದೆ. ಬಾಡಿಗೆ ಕಟ್ಟಡದಲ್ಲಿ ಚಟುವಟಿಕೆ ನಡೆಸುತ್ತಿರುವ ಠಾಣೆಗಳಿಗೆ ಜಾಗ ಲಭ್ಯವಾದಲ್ಲಿ ಶೀಘ್ರದಲ್ಲೇ ಕಟ್ಟಡ ನಿರ್ಮಿಸಲಾಗುವುದು. ಜಾಗ ಲಭ್ಯವಾಗದೇ ಇರುವ ಕಾರಣ ರಾಜ್ಯದಲ್ಲಿ ಸುಮಾರು 40 ಠಾಣೆಗಳು ಬಾಡಿಗೆ ಕಟ್ಟಡದಲ್ಲೇ ಇರುವಂತಾಗಿದೆ.
ಗಡಿಪ್ರದೇಶವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಕ್ರಿಮಿನಲ್‍ಗಳು ಬೇರೆ ರಾಜ್ಯಗಳಿಗೆ ಪರಾರಿಯಾಗುವುದು ಸುಲಭವಾಗಿರುವುದು ಹಲವು ಪ್ರಕರಣಗಳಿಂದ ಪತ್ತೆಯಾಗಿದೆ. ಇಲ್ಲಿ ನಡೆಯುವ ಅನೇಕ ಕ್ರಿಮಿನಲ್ ಘಟನೆಗಳು ಪೂರ್ವನಿಯೋಜಿತವಾಗಿವೆ. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದವರು ಹೇಳಿದರು.
      ಸಂಯೋಜಿತ ಕ್ರಮ ಶೀಘ್ರದಲ್ಲಿ : ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳು ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಸಂಯೋಜಿತ ಕ್ರಮ ಆರಂಭಿಸಲಿದ್ದು, 15 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಈ ಸಂಬಂಧ ಕ್ರಮ ಆರಂಭಗೊಳ್ಳಲಿದೆ ಎಂದರು.
       ಶೀಘ್ರದಲ್ಲಿ ಸೆಂಟ್ರಲೈಸ್ಡ್ ಇಂಡಿವಿಝಲ್ ಮೋನಿಟರಿಂಗ್ ಸಿಸ್ಟಂ : ರಾಜ್ಯದಲ್ಲಿ ಶೀಘ್ರದಲ್ಲೇ ಸೆಂಟ್ರಲೈಸ್ಡ್ ಇಂಡಿವಿಝಲ್ ಮೋನಿಟರಿಂಗ್ ಸಿಸ್ಟಂ ಜಾರಿಗೆ ಬರಲಿದೆ. ಮನೆಗಳಲ್ಲಿ, ವ್ಯಾಪಾರ ಸಂಸ್ಥೆಗಳಲ್ಲಿ ಐ.ಟಿ.ಕೇಂದ್ರಿತ ಡಿಜಿಟಲ್ ಕೇಂದ್ರಿತ ಡಿಜಿಟಲ್ ಸಿ.ಸಿ.ಟಿ.ವಿ.ಗಳ ಇಲ್ಲಿನ ದೃಶ್ಯಗಳನ್ನು ತಿರುವನಂತಪುರದಲ್ಲೇ  ಕುಳಿತು ವೀಕ್ಷಿಸಬಹುದುದಾದ ಸೌಲಭ್ಯ ಇರುವುದು. ಅಪರಾಧ ಪ್ರಕರಣಗಳನ್ನು ಮತ್ತು ನಿಜವಾದ ಆರೋಪಿಗಳನ್ನು ಪತ್ತೆಮಾಡಲು ಈ ಸೌಲಭ್ಯ ಉಪಕಾರಿಯಾಗಲಿದೆ ಎಂದು ಡಿ.ಜಿ.ಪಿ. ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries