ಕಾಸರಗೋಡು: ಕೇರಳ ರಾಜ್ಯ ಯುವಜನ ಕಲ್ಯಾಣ ಮಂಡಳಿ ಸಂಘಸಂಸ್ಥೆಗಳ ನೋಂದಣಿಯನ್ನು ಆನ್ ಲೈನ್ ಮೂಲಕ ನಡೆಸಲಿದೆ. ಚಾರಿಟೇಬಲ್ ಸೊಸೈಟೀಸ್ ಆಕ್ಟ್ ಪ್ರಕಾರ ನೋಂದಣಿ ನಡೆಸಿರುವ ಅಥವಾ ಸ್ವಯಂ ಸೇವಾ ಸಂಘಟನೆಗಳೂ, ಕಲಾ ಮತ್ತು ಕ್ರೀಡಾ ಕ್ಲಬ್ ಗಳು, ಯುವ ಕೃಷಿ ಕ್ಲಬ್ ಗಳು, ರೆಸಿಡೆನ್ಸ್ ಅಸೋಸಿಯೇಶನ್ ನಲ್ಲಿ ನೋಂದಣಿ ನಡೆಸಿರುವ ವಿಂಗ್‍ಗಳು, ಯುವ ನೌಕರಿ ಕ್ಲಬ್ ಗಳು, ಕಾಲೇಜುಗಳ ಮತ್ತು ತತ್ಸಮಾನ ಶಿಕ್ಷಣ ಸಂಸ್ಥೆಗಳಲ್ಲಿರುವ ಕ್ಲಬ್ ಗಳು, ಅಡ್ವೆಂಚರಸ್ ಕ್ಲಬ್ ಗಳು, ಟ್ರಾನ್ಸ್ ಜೆಂಡರ್ಸ್ ಕ್ಲಬ್ ಗಳು ಮೊದಲಾದುವು ಯುವಜನ ಕಲ್ಯಾಣ ಮಂಡಳಿಯ ವೆಬ್ ಸೈಟ್ ಮೂಲಕ ನೋಂದಣಿ ನಡೆಸಬಹುದು. ಪ್ರಚಲಿತ ಅಫಿಲಿಯೇಶನ್ ಇರುವ ಎಲ್ಲ ಯೂತ್ ಕ್ಲಬ್ ಗಳು, ಸ್ವಯಂ ಸೇವಾ ಸಂಘಟನೆ ಗಳು ಆನ್ ಲೈನ್ ಮೂಲಕ ನೋಂದಣಿ ನಡೆಸಬಹುದು. ಕೇರಳ ರಾಜ್ಯ ಯುವಜನ ಕಲ್ಯಾಣ ಮಂಡಳಿ ರಚಿಸಿದ ಯುವ ಕ್ಲಬ್ ಗಳ ಆನ್ ಲೈನ್ ನೋಂದಣಿ ಕಾಸರಗೋಡು ಜಿಲ್ಲಾ ಯುವಜನ ಕೇಂದ್ರ ಮೂಲಕ ನಡೆಸಬೇಕು. ವೆಬ್ ಸೈಟ್ ಸಂದರ್ಶಿಸುವ ಸಂಘಸಂಸ್ಥೆಗಳು ಹೆಚ್ಚಿನ ಮಾಹಿತಿಗೆ ಕಾಸರಗೋಡು ಜಿಲ್ಲಾ ಯುವಜನ ಕೇಂದ್ರವನ್ನು ಸಂಪರ್ಕಿಸಬಹುದು.
ಸಂಘ ಸಂಸ್ಥೆಗಳ ನೋಂದಣಿ ಇನ್ನು ಆನ್‍ಲೈನ್ ಮೂಲಕ
0
ಆಗಸ್ಟ್ 21, 2019