ಕುಂಬಳೆ: ಇಲ್ಲಿಗೆ ಸಮೀಪದ ಅನಂತಪುರ ನಿವಾಸಿಗಳಾದ ಪ್ರೇಮ ಮತ್ತು ರಾಜು ಎಂಬವರ ಮನೆಗೆ ಕುಂಬಳೆ ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ನ ಪಧಾದಿಕಾರಿಗಳು ಭೇಟಿ ನೀಡಿ ಈ ಬಡ ಕುಟುಂಬಕ್ಕೆ ಅಕ್ಕಿ, ಬೇಳೆ ,ತರಕಾರಿ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದರು.
ಪುಟ್ಟ ಮನೆಯೊಂದರಲ್ಲಿ ಓರ್ವ ಅಸೌಖ್ಯ ಪೀಡಿತ ಮಗಳ ಸಹಿತ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿರುವ ದಲಿತ ಕುಟುಂಬಕ್ಕೆ ಸೇರಿದ ಪ್ರೇಮ ತನ್ನ ಪತಿಯೊಂದಿಗೆ ಕಡು ಬಡತನದಲ್ಲಿ ಜೀವನ ನಿರ್ವಹಿಸುವ ವಿವರ ತಿಳಿದ ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಜಿತ್ ಕುಮಾರ್, ಟ್ರಸ್ಟಿಗಳಾದ ಸೋಮನ್,ಫ್ರಾನ್ಸಿಸ್ ಡಿ 'ಸೋಜಾ , ಶೋಭಾ ನಾಯ್ಕಾಪು ,ಮತ್ತು ಸುನಿತಾ ಕುಂಟಂಗೇರಡ್ಕ ಅವರು ಮನೆಗೆ ಭೇಟಿ ನೀಡಿ ನೆರವು ಹಸ್ತಾಂತರಿಸಿದರು.


