ಮುಳ್ಳೇರಿಯ: ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಸಂಘಟನೆಯ ರಾಜ್ಯ ಪದಾಧಿಕಾರಿಗಳಿಗೆ ಅಭಿನಂದನೆ ಕಾರ್ಯಕ್ರಮ ಆ.25ರಂದು ಬೆಳಿಗ್ಗೆ 10ಕ್ಕೆ ಮುಳ್ಳೇರಿಯಾ ಯಾದವ ಸಭಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಅಖಿಲ ಕೇರಳ ಯಾದವ ಸಭಾ ರಾಜ್ಯಾಧ್ಯಕ್ಷ ವಯಲಪುರಂ ನಾರಾಯಣನ್ ಉದ್ಘಾಟಿಸುವರು. ತಾಲೂಕು ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಮೇಶ್ ಯಾದವ್ ಭಾಗವಹಿಸುವರು ನಗದು ಪುರಸ್ಕಾರವನ್ನು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯರಾಘವನ್ ವಿತರಿಸುವರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಕ್ಯಾಪ್ಟನ್ ನಾರಾಯಣ ಮಣಿಯಾಣಿ ಅವರನ್ನು ಸನ್ಮಾನಿಸಲಾಗುವುದು. ಎಂಬಿಬಿಎಸ್ ಪಡೆದ ವಿದ್ಯಾರ್ಥಿಯನ್ನು ಡಾ. ಕಿಶೋರ್ ಕುಮಾರ್ ಕುಂಬಳೆ ಸ್ಮರಣಿಕೆ ನೀಡಿ ಗೌರವಿಸುವುದು. ವೇದಿಕೆಯಲ್ಲಿ ಉದಯ ಕುಮಾರ್ ಬದಿಯಡ್ಕ, ದಾಮೋದರನ್ ಕೊಟ್ಟಂಗುಳಿ, ಕೆ.ಎನ್.ದಾಮೋದರನ್ ಚಿಮೇನಿ, ಸದಾನಂದನ್ ಕಣ್ಣೂರು, ಡಾ. ಎಚ್.ಶಾಂಭವಿ ಕುಂಬಳೆ, ಕೃಷ್ಣನ್ ಅಡ್ಕತೊಟ್ಟಿ, ಕೆ.ಗಂಗಾಧರ್ ತೆಕ್ಕೆಮೂಲೆ, ಗೋಪಿ ಟೀಚರ್, ನಾರಾಯಣ ಮಣಿಯಾಣಿ ಚೇರುಕೂಡ್ಲು, ರಾಧಾಕೃಷ್ಣ ಅಣಂಗೂರು ಮತ್ತಿತರರು ಉಪಸ್ಥಿತರಿರುವರು.

