ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್ ಆಪ್ ಎಲ್ಲರೂ ಬಳಸುತ್ತಾರೆ. ಈ ಮೆಸೆಂಜರ್ ಆಪ್ ಅನ್ನು ಬಳಸಿದರೋರೇ ಕಡಿಮೆ. ಇಂಥ ವಾಟ್ಸ್ ಆಪ್ ಜನರಿಗಾಗಿ ಹೊಸ ಹೊಸ ಫೀಚರ್ಗಳನ್ನು ಜಾರಿಗೆ ತರುತ್ತಲೇ ಈದೆ. ಈಗಲೂ ಹೊಸ ಫೀಚರ್ಗಳನ್ನು ನೀಡಲು ಅದು ಸಜ್ಜಾಗಿದ್ದು, ಕೆಲವು ಟೆಸ್ಟಿಂಗ್ ಹಂತದಲ್ಲಿದೆ.
ಅಪ್ಡೆಟ್ ಆದರೆ ಇನ್ನು ಕೆಲವೇ ದಿನಗಳಲ್ಲಿ ಇವುಗಳೆಲ್ಲ ನಿಮ್ಮ ಮೊಬೈಲ್‍ನಲ್ಲಿ ಲಭ್ಯವಾಗಲಿದೆ.
ಫಿಂಗರ್ ಪ್ರಿಂಟ್ ಲಾಕ್ !
ಆಂಡ್ರಾಯಿಡ್ ಫೋನ್ ಬಳಕೆ ಮಾಡುವವರಿಗೆ ಈ ಫಿಂಗರ್ ಪ್ರಿಂಟ್ ಲಾಕ್ ಬಳಕೆಗೆ ಲಭ್ಯವಾಗಲಿದೆ. ವಾಟ್ಸ್ ಆಪ್‍ನ ಪ್ರೈವೆಸಿ ಸೆಕ್ಷನ್‍ನಲ್ಲಿ ಫಿಂಗರ್ ಪ್ರಿಂಟ್ ಲಾಕ್ ಸೌಲಭ್ಯ ಸಿಗಲಿದೆ. ಇದರಿಂದ ನಿಮ್ಮ ಫಿಂಗರ್‍ಪ್ರಿಂಟ್ ಬಳಸಿಯೇ ವಾಟ್ಸ್ ಆಪ್ ಲಾಕ್, ಅನ್‍ಲಾಕ್ ಮಾಡಬಹುದು.
ಒಂದು ವೇಳೆ ಫೋನ್ ಬೇರೆಯವರು ತೆಗೆದುಕೊಂಡಿದ್ದರೂ, ಕಳವಾಗಿದ್ದರೂ ವಾಟ್ಸ್ ಆಪ್ ನೋಡಲು ಸಾಧ್ಯವಿಲ್ಲ. ಅಲ್ಲದೇ ಇದರೊಂದಿಗೆ ನೋಟಿಫಿಕೇಶನ್‍ಗಳನ್ನು ಹೈಡ್ ಮಾಡುವ ಸೌಲಭ್ಯವಿರಲಿದೆ. ಜೊತೆಗೆ ಆಪಲ್ ಫೋನ್, ಟ್ಯಾಬ್ ಬಳಸುವವರು ಫೇಸ್‍ಲಾಕ್ ಮೂಲಕ ಕಾರ್ಯನಿರ್ವಹಿಸಲು ಅವಕಾಶವಿದೆ. ಸದ್ಯ ಬೆಟಾ ಆವೃತ್ತಿಯಲ್ಲಿ ಈ ಫೀಚರ್ ಲಭ್ಯವಿದೆ.
ಇತ್ತೀಚೆಗೆ ಫಾರ್ವಡ್ ಮಾಡಿದ ಮೆಸೇಜ್:
ಒಂದು ಮೆಸೇಜ್ ಅನ್ನು ಐದಕ್ಕೂ ಹೆಚ್ಚು ಬಾರಿ ಫಾರ್ವರ್ಡ್ ಮಾಡಲಾಗಿದ್ದರೆ, ಅದು ಫ್ರೀಕ್ವೆಂಟ್ಲಿ ಫಾರ್ವರ್ಡೆಡ್ ಮೆಸೇಜ್ ಆಗಿ ಕಾಣಿಸುತ್ತದೆ. ಇದು ಸುಳ್ಳು ಮೆಸೇಜ್‍ಗಳನ್ನು ಪತ್ತೆ ಹಚ್ಚಲೂ ನೆರವಾಗಲಿದೆ. ಈ ಸೌಲಭ್ಯ ಈಗಾಗಲೇ ಲಭ್ಯವಿದೆ.
ವಾಯ್ಸ ಮೆಸೇಜ್‍ಗಳು ತಡೆಯಿಲ್ಲದೆ ಕೇಳಿ:
ಈ ಮೊದಲು ವಾಯ್ಸ ಮೆಸೇಜ್ ಬಂದಿದ್ದನ್ನು ಒಂದೊಂದಾಗಿ ಬಳಕೆದಾರ ಕೇಳಬೇಕಿತ್ತು. ಆದರೆ ಇನ್ನು ವಾಯ್ಸ ಮೆಸೇಜ್‍ಗಳನ್ನು ಒಟ್ಟಾಗಿ ಕೇಳಬಹುದು. ವಾಯ್ಸ ಮೆಸೇಜ್‍ಗಳನ್ನು ಒಟ್ಟಾಗಿ ಕಳಿಸಿದಿದ್ದರೆ, ಕೇಳುವುದಕ್ಕೆ ಇದು ನೆರವಾಗುತ್ತದೆ. ಮುಂದಿನ ವಾಯ್ಸ ಮೆಸೇಜ್ ಯಾವುದು ಎಂದು ಹುಡುಕಾಡುವ ಅಗತ್ಯವಿರುವುದಿಲ್ಲ.
ಗ್ರೂಪ್ ಇನ್ವಿಟೇಷನ್ :
ವಾಟ್ಸ್ ಆಪ್‍ಗಳಲ್ಲಿ ಗ್ರೂಪ್‍ಗಳ ಕಿರಿಕ್ ಇದ್ದಿದ್ದೇ. ಎಲ್ಲರೂ ಗ್ರೂಪ್‍ಗ್ಳಿಗೆ ಸೇರಿಸುತ್ತ ಇರುತ್ತಾರೆ. ಇದನ್ನು ತಪ್ಪಿಸಿಕೊಳ್ಳುವಂತೆ ವಾಟ್ಸ್ ಆಪ್‍ನಲ್ಲಿ ಫೀಚರ್ ಇರಲಿದೆ. ಇದು ಗ್ರೂಪ್‍ಗೆ ಸೇರಿಸದಂತೆ ತಡೆಯುತ್ತದೆ. ಆದರೆ ಇದರ ಅವಧಿ 72 ಗಂಟೆ ಮಾತ್ರ ಇರಲಿದ್ದು, ಮತ್ತೆ ಇದನ್ನು ಆಕ್ಟಿವೇಟ್ ಮಾಡಬೇಕಾಗುತ್ತದೆ.


