HEALTH TIPS

ಚಾನೆಲ್ ಗಳಿಂದ ಹೊಸ ನೀತಿಯ ದುರ್ಬಳಕೆ: ಟ್ರಾಯ್

   
    ನವದೆಹಲಿ: ಟಿವಿ ಚಾನೆಲ್ ಗಳ ಬೆಲೆ ನಿಗದಿಸುವಲ್ಲಿ ಕಳೆದ ವರ್ಷ ಜಾರಿಗೆ ತಂದ ಹೊಸ ನೀತಿಯನ್ನು ಪ್ರಸಾರಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್)ಅಭಿಪ್ರಾಯಪಟ್ಟಿದೆ. ಬೆಲೆ ಹಾಗೂ ಚಾನೆಲ್ ಗಳ ಆಯ್ಕೆಗೆ ಸಂಬಂಧಿಸಿದಂತೆ ಎದುರಾದ ಸಮಸ್ಯೆಗಳು ಗಮನಕ್ಕೆ ಬಂದ ನಂತರದಲ್ಲಿ ಸಂಬಂಧಿತ ಎಲ್ಲ ಸಂಸ್ಥೆಗಳ ಅಭಿಪ್ರಾಯವನ್ನು ಟ್ರಾಯ್ ಕೇಳಿದೆ. 2018 ಡಿಸೆಂಬರ್ 29 ರಂದು ಟ್ರಾಯ್ ಹೊಸ ನಿಯಮ ಜಾರಿಗೆ ತಂದಿತ್ತು. ಇದಕ್ಕೆ ದೇಶಾದ್ಯಂತ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು.
      ಹೊಸ ನೀತಿಯಲ್ಲಿ ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶ ನೀಡಿತ್ತು. ಇದರಿಂದಾಗಿ ಟಿವಿ ಚಾನೆಲ್ ಬೆಲೆಗಳಲ್ಲಿ ಪಾರದರ್ಶಕತೆ ಉಂಟಾಗಿತ್ತು. ಇಡೀ ವಲಯದಲ್ಲಿ ವಹಿವಾಟು ಪ್ರಕ್ರಿಯೆ ಸರಾಗವಾಗಿರುವುದು ಮತ್ತು ವಿವಿಧ ಸಂಸ್ಥೆಗಳ ಮಧ್ಯೆ ವಿವಾದಗಳನ್ನು ಕಡಿಮೆ ಮಾಡಿರುವುದು ಸೇರಿದಂತೆ ಹಲವು ಅನುಕೂಲಗಳಾಗಿದ್ದವು. ಆದರೆ ಗ್ರಾಹಕರಿಗೆ ಟಿವಿ ಚಾನೆಲ್ ಗಳನ್ನು ವೀಕ್ಷಿಸಲು ಆಯ್ಕೆಗಳ ಕೊರತೆ ಇದ್ದವು ಎಂದು ಟ್ರಾಯ್ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries